ಪೇಜಾವರ ಶ್ರೀಗಳ ಕುರಿತಂತೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ನೀಡಿದ್ದ ಹೇಳಿಕೆ ಸಂಬಂಧ ಇಂದು ವಿಚಾರಣೆಗಾಗಿ ಬೆಂಗಳೂರಿನ ಬಸವನಗುಡಿ ಪೋಲಿಸ್ ಠಾಣೆಗೆ ಆಗಮಿಸಿದರು.
ತಮ್ಮ ವಕೀಲರೊಂದಿಗೆ ಹಂಸಲೇಖ ಪೊಲೀಸ್ ಠಾಣೆಗೆ ಆಗಮಿಸಿದರು ಕೊತೆಯಲ್ಲಿ ನಟ ಚೇತನ್
ಆಗಮಿಸಿದ ಹಿನ್ನೆಲೆಯಲ್ಲಿ ಪರ ವಿರೋಧದ ಗುಂಪುಗಳ ನಡುವೆ ವಾಗ್ವಾದ ನಡೆಯುತ್ತಿದೆ. ಈ ನಡುವೆ ನಟ ಚೇತನ್ ಠಾಣೆ ಪ್ರವೇಶಕ್ಕೆ ಪೋಲಿಸರು ತಡೆ ನೀಡಿದರು .
ಹಿಂದೂ ಪರ ಕಾರ್ಯಕರ್ತರು ಭಾರಿ ಸಂಖ್ಯೆಯಲ್ಲಿ ಸೇರಿದ್ದಾರೆ. ಹಂಸಲೇಖ ಪರವಾಗಿಯೂ ಪ್ರಗತಿಪರರ ಗುಂಪು ಸೇರಿದೆ.
ಈ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಬಳಿ ಬೀಗಿ ಪೊಲೀಸ್ ಭದ್ರತೆಯನ್ನು ಏರ್ಪಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಭಜರಂಗದಳದ ಮುಖಂಡ ತೇಜಸ್, ಹಂಸಲೇಖ ಕ್ಷಮೆ ಕೇಳಿದರೇ ಆಗೋದಿಲ್ಲ. ಬೇಷರತ್ತು ಕ್ಷಮೆಯಾಚಿಸಬೇಕು.
ಈ ವಿಷಯದಲ್ಲಿ ನಟ ಚೇತನ್ ಬರುವ ಅವಶ್ಯಕತೆ ಇಲ್ಲ. ಚೇತನ್ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಚೇತನ್ ಈ ದೇಶದ ನಾಗರಿಕ ಅಲ್ಲ. ಸಸ್ಯಾಹಾರಿ ಹಾಗೂ ಮಾಂಸಹಾರಿಗಳನ್ನು ಒಡೆಯುವ ಕೆಲಸವನ್ನು ಚೇತನ್ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಪೋಲಿಸ್ ಠಾಣೆ ಒಳಗೆ ಚೇತನ್ ಅವರನ್ನು ಬಿಡಬಾರದು. ಚೇತನ್ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚೇತನ್ ಗೆ ಠಾಣೆ ಪ್ರವೇಶಕ್ಕೆ ನಿರ್ಬಂಧ:
ಈ ನಡುವೆ ಚೇತನ್ ನನ್ನು ಪೋಲಿಸರು ಠಾಣೆಯೊಳಗೆ ಬಿಡಲಿಲ್ಲ. ಪೊಲೀಸರ ಈ ಕ್ರಮವನ್ನು ಪ್ರತಿಭಟಿಸಿ ಚೇತನ್ ರಸ್ತೆ ತಡೆಗೆ ಮುಂದಾದರು. ಕೆಲವು ಕನ್ನಡ ಪರ ಸಂಘಟನೆಗಳು ಚೇತನ್ ಗೆ ಸಾಥ್ ನೀಡಿದರು.
- ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ: DYSP ವಿರುದ್ಧ ಗಂಭೀರ ಆರೋಪ
- ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
- ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
- ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ
- ಕಾನ್ಸ್ಟೇಬಲ್ ನೇಮಕಾತಿ ದೈಹಿಕ ಪರೀಕ್ಷೆ: ಓಟದ ವೇಳೆ ಬಿದ್ದ ಯುವಕನ ದುರ್ಮರಣ
More Stories
ಐಶ್ವರ್ಯ ಗೌಡ ಪ್ರಕರಣ: ಸರ್ಕಾರದ ವಿರುದ್ಧ ಹೆಚ್ಡಿಕೆ ವಾಗ್ದಾಳಿ
ಸಾರಿಗೆ ನೌಕರರಿಗೆ ಸರ್ಕಾರದ ಭರವಸೆ: 2 ಸಾವಿರ ಕೋಟಿ PF ನಿಧಿ ಬಿಡುಗಡೆ
ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷರ ಆಯ್ಕೆ: ಚುನಾವಣೆಯ ಮೂಲಕ ತೀರ್ಮಾನ