January 29, 2026

Newsnap Kannada

The World at your finger tips!

MP,mandya,election

Sumaltha's entry into state politics? ರಾಜ್ಯ ರಾಜಕಾಣಕ್ಕೆ ಸುಮಲತಾ ಎಂಟ್ರಿ?

ಪರಿಷತ್​​ ಚುನಾವಣೆ: ಕಾಂಗ್ರೆಸ್​, ಬಿಜೆಪಿಗೂ ಬೆಂಬಲವಿಲ್ಲ : ನಾನು ತಟಸ್ಥವಾಗುತ್ತೇನೆ – ಸುಮಲತಾ

Spread the love

ವಿಧಾನ ಪರಿಷತ್​​​ ಚುನಾವಣೆಯಲ್ಲಿ ಮಂಡ್ಯ ಸಂಸದೆ ಸುಮಲತಾ, ಕಾಂಗ್ರೆಸ್​ ಮತ್ತು ಬಿಜೆಪಿಗೆ ಬೆಂಬಲ ನೀಡುವುದಿಲ್ಲ . ತಟಸ್ಥಳಾಗಿರುತ್ತೇನೆ ಎಂದು ಪ್ರಕಟಿಸುವ ಮೂಲಕ ಬಿಗ್ ಶಾಕ್​​ ನೀಡಿದ್ದಾರೆ.

ನಾನು ಮಂಡ್ಯ ಜನರ ಆಶೀರ್ವಾದದಿಂದ ಈ ಸ್ಥಾನದಲ್ಲಿ ಇದ್ದೇನೆ. ಎಲ್ಲಾ ಪಕ್ಷದವರು ನನಗೆ ಸಪೋರ್ಟ್ ಮಾಡಿದ್ದಾರೆ. ಯಾವುದಾದರು ಒಂದು ಪಕ್ಷಕ್ಕೆ ಬೆಂಬಲ ಕೊಟ್ಟರೆ ಅದು ವಿವಾದ ಸೃಷ್ಟಿಸುತ್ತೆ. ಮಂಡ್ಯ ಜಿಲ್ಲೆಗೆ ಯಾರು ಅಭಿವೃದ್ದಿ ಕೆಲಸ ಮಾಡುತ್ತಾರೊ ಅವರಿಗೆ ವೋಟ್ ಅಂತು ಹಾಕುತ್ತೇನೆ ಎಂದು ಹೇಳಿದರು.

ಯಾರಿಗೂ ಬೆಂಬಲ ನೀಡದೆ ತಟಸ್ಥವಾಗಿರುತ್ತೇನೆ. ಇದು ಚುನಾಯಿತ ಸದಸ್ಯರಿಂದ ನಡೆಯುವ ಚುನಾವಣೆ. ಇದರಲ್ಲಿ ಕ್ಯಾಂಪೇನ್ ಮಾಡುವ ಸಂದರ್ಭ ಬರುವುದಿಲ್ಲ. ಅವರವರ ಅಭ್ಯರ್ಥಿಗಳ ಶಕ್ತಿ ಮೇಲೆ ಎಲ್ಲಾ ಅವಲಂಬಿತವಾಗಿರುತ್ತೆ. ನಾನು ಎಲ್ಲಿಗೂ ಪ್ರಚಾರಕ್ಕೆ ಬರಲ್ಲ, ಖಂಡಿತ ತಟಸ್ಥ. ನನ್ನ ಸಂಪರ್ಕಿಸಿ ಬೆಂಬಲ ಕೇಳಿದವರಿಗೆ ಶುಭಾಶಯವಷ್ಟೆ ಹೇಳುತ್ತೇನೆ ಎಂದು ತಿಳಿಸಿದರು.

error: Content is protected !!