March 7, 2026

Newsnap Kannada

The World at your finger tips!

india vs pak

ಪಾಕ್ ಗೆಲುವು ಸಂಭ್ರಮಿಸಿದ ಹೆಂಡತಿ, ಅತ್ತೆ ವಿರುದ್ದವೇ ದೂರು

Spread the love

ಅ. 24 ರಂದು ಪಾಕ್ – ಇಂಡಿಯಾ ನಡುವೆ ನಡೆದ ಪಂದ್ಯದಲ್ಲಿ ಭಾರತ ಸೋತಾಗ ಅತ್ತೆ, ಹೆಂಡತಿ ಸಂಭ್ರಮಿಸಿದ್ದನ್ನು ಪ್ರತಿಭಟಿಸಿ
ದೇಶ ಪ್ರೇಮಿ ವ್ಯಕ್ತಿಯೊಬ್ಬರು ತನ್ನ ಪತ್ನಿ ವಿರುದ್ಧವೇ ದೂರು ನೀಡಿದ್ದಾರೆ.

ಉತ್ತರ ಪ್ರದೇಶದ ರಾಂಪುರ ಅಜೀಮ್ ನಗರದ ನಿವಾಸಿ ಇಶಾನ್ ಮಿಯಾ ದೂರು ದಾಖಲಿಸಿರುವ ವ್ಯಕ್ತಿ.

ಪಾಕಿಸ್ತಾನ ಗೆದ್ದಾಗ ಸಂಭ್ರಮಿಸಿದ್ದೂ ಅಲ್ಲದೇ, ಭಾರತವನ್ನು ಗೇಲಿ ಮಾಡಿದ ಆರೋಪದ ಮೇಲೆ ಪತ್ನಿ ರಬಿಯಾ ಶಮ್ಸಿ ಹಾಗೂ ಅವರ ಅತ್ತೆ ವಿರುದ್ಧ ದೂರು ದಾಖಲಿಸಿದ್ದಾರೆ. ಇವರು ಪಟಾಕಿ ಹೊಡೆದು ಸಂಭ್ರಮಿಸಿದ್ದರು ಎನ್ನಲಾಗಿದೆ.

ಈ ಸಂಬಂಧ ರಾಂಪುರ ಜಿಲ್ಲೆಯ ಗಂಜ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153-ಎ ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67 ಅಡಿಯಲ್ಲಿ ಎಫ್​ಐಆರ್ ದಾಖಲಿಸಲಾಗಿದೆ.

ಅಕ್ಟೋಬರ್ 24 ರಂದು ನಡೆದ ಟಿ-20 ವಿಶ್ವಕಪ್​ ಕ್ರಿಕೆಟ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದವು. ಈ ವೇಳೆ ಪಾಕಿಸ್ತಾನ ಬರೋಬ್ಬರಿ 10 ವಿಕೆಟ್​ಗಳಿಂದ ಭಾರತವನ್ನು ಮಣಿಸಿತ್ತು. ಪಾಕಿಸ್ತಾನದ ಗೆಲುವನ್ನು ಭಾರತದಲ್ಲೂ ಹಲವರು ಸಂಭ್ರಮಿಸಿದ್ದರು. ಈ ಸಂಬಂಧ ಅನೇಕ ಪ್ರಕರಣಗಳು ದಾಖಲಾಗಿವ

error: Content is protected !!