December 23, 2024

Newsnap Kannada

The World at your finger tips!

cylinder

ಸಿಯೆರಾ ಲಿಯೋನ್​ನಲ್ಲಿ ಆಯಿಲ್ ಟ್ಯಾಂಕರ್​​ ಸ್ಫೋಟ : 108 ಮಂದಿ ಸಾವು

Spread the love

ವಿಶ್ವದ ಬಡರಾಷ್ಟ್ರ ಪಶ್ಚಿಮ ಆಫ್ರಿಕಾದ ಪುಟ್ಟ ದೇಶ ಸಿಯೆರಾ ಲಿಯೋನ್​ ತೈಲ ಟ್ಯಾಂಕರ್​​
ಅಪಘಾದಿಂದ ಉರುಳಿ ಬಿದ್ದಾಗ
ಇಂಧನ ಸಂಗ್ರಹಿಸಲು ಜನ ಮುಗಿಬಿದ್ದ ವೇಳೆ ಸ್ಫೋಟ ಸಂಭವಿಸಿದೆ. ಈ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿಗೆ ನೂರಕ್ಕೂ ಅಧಿಕ ಮಂದಿ ಬಲಿಯಾಗಿದ್ರೆ, ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚಾಗ್ತಾನೆ ಇದೆ.

ಸಿಯೆರಾ ಲಿಯೋನ್ ದೇಶದ ರಾಜಧಾನಿ ಫ್ರೀಟೌನ್​​​​​ನ ವೆಲ್ಲಿಂಗ್​ಟನ್​ನಲ್ಲಿ ಸಂಭವಿಸಿದ ಭೀಕರ ಸ್ಫೋಟ 108ಕ್ಕೂ ಅಧಿಕ ಮಂದಿಯನ್ನು ಬಲಿ ಪಡೆದಿದೆ.

ಅಲ್ಲದೇ 90ಕ್ಕೂ ಹೆಚ್ಚು ಮಂದಿ ಸಾವು, ಬದುಕಿನ ನಡುವೆ ಹೋರಾಟ ಮಾಡ್ತಿದ್ದಾರೆ.

ಸ್ಟೇಷನ್​​​ನಲ್ಲಿ ಇಂಧನ ಇಳಿಸಲು ಹೊರಟಿದ್ದ ಟ್ಯಾಂಕರ್​​​ಗೆ ಗ್ರಾನೈಟ್ ತುಂಬಿದ್ದ ಟ್ರಕ್​​​ ಡಿಕ್ಕಿಯಾಗಿದೆ.

ಟ್ರಕ್​​​ಗೆ ಡಿಕ್ಕಿಯಾಗಿ ಟ್ಯಾಂಕರ್​​​ನಿಂದ ಇಂಧನ​ ಲೀಕ್​​ ಆಗ್ತಿತ್ತು. ತಕ್ಷಣ ಎರಡೂ ವಾಹನದಿಂದ ಇಳಿದ ಚಾಲಕರು ಜನರಿಗೆ ಇಂಧನ ಸೋರಿಕೆ ಬಗ್ಗೆ ಎಚ್ಚರಿಕೆ ನೀಡಿದರೂ ಲೆಕ್ಕಿಸದೇ ಇಂಧನ ಸಂಗ್ರಹಿಸಲು ಜನರು ಮುಗಿಬಿದ್ದಿದ್ದಾರೆ.

ತೈಲ ಸಂಗ್ರಹಿಸಲು ಜನ ಮುಗಿಬಿದ್ದ ವೇಳೆ ಟ್ಯಾಂಕರ್ ಸ್ಫೋಟಗೊಂಡಿದೆ. ಭಾರೀ ಶಬ್ದದೊಂದಿಗೆ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ಈ ಘಟನೆಯಲ್ಲ ‍108 ಮಂದಿ ಸಾವನ್ನಪ್ಪಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!