December 19, 2024

Newsnap Kannada

The World at your finger tips!

d4c4900b b2af 4b7b a743 03f81b83f304

ಚಾಟಿ ಏಟು ತಿಂದ ಛತ್ತೀಸ್​ಗಢ ಸಿಎಂ – ಇದು ಹರಕೆ ಸೇವೆ

Spread the love

ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಗೋವರ್ಧನ ಪೂಜೆಯ ಭಾಗವಾಗಿ ಚಾಟಿ ಏಟನ್ನು ಸ್ವೀಕರಿಸಿದ್ದಾರೆ.

ಹುಲ್ಲು ಹಾಗೂ ಸ್ಥಳೀಯವಾಗಿ ದೊರೆಯುವ ಕುಶ್​ ದರಗಳಿಂದ ನೇಯಲ್ಪಟ್ಟಿರುವ ‘ಸೊಂಟಾ’ ಎಂದು ಕರೆಯಲ್ಪಡುವ ಚಾಟಿಯಿಂದ ಏಟು ಸ್ವೀಕರಿಸಿದ್ದಾರೆ.

ಈ ಕುರಿತ ವಿಡಿಯೋವನ್ನು ಸಿಎಂ ಭೂಪೇಶ್​ ಬಘೇಲ್​ ಹಂಚಿಕೊಂಡಿದ್ದಾರೆ

ದೇವರಿಗೆ ಹರಕೆ ಕಟ್ಟಿಕೊಂಡಿದ್ದೆ. ಹೀಗಾಗಿ ದೇವಸ್ಥಾನದ ಸಿಬ್ಬಂದಿಯೋರ್ವ ಸಿಎಂ ಅವರಿಗೆ ಚಾಟಿಯಿಂದ ಕೈಗೆ ಹೊಡೆಯುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ವೇಳೆ ಡೋಲು ಇತರೇ ಸಾಂಪ್ರದಾಯಿಕ ವಾದ್ಯಗಳನ್ನು ಬಾರಿಸಲಾಗುತ್ತಿತ್ತು. ಈ ವಿಡಿಯೋವನ್ನು ಛತ್ತೀಸ್​ಗಢದ ದುರ್ಗ್​ ಜಿಲ್ಲೆಯ ದೇವಾಲಯವೊಂದರಲ್ಲಿ ಚಿತ್ರೀಕರಿಸಲಾಗಿದೆ. ಬರೋಬ್ಬರಿ 8 ಬಾರಿ ಸಿಎಂಗೆ ಚಾಟಿ ಏಟು ಕೊಟ್ಟ ವ್ಯಕ್ತಿ, ಬಳಿಕ ಸಿಎಂ ಅವರನ್ನು ಅಪ್ಪಿಕೊಂಡು ಧನ್ಯವಾದ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!