March 13, 2026

Newsnap Kannada

The World at your finger tips!

gadag

ಗದಗ – ತೋಟದ ಮನೆಯಲ್ಲಿ 3 ತಿಂಗಳ ಮಗು, ದಂಪತಿ ದುರಂತ ಸಾವು

Spread the love

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ 3 ತಿಂಗಳ ಮಗು ಹಾಗೂ ಪತ್ನಿಗೆ ನೇಣುಬಿಗಿದು ಬಳಿಕ ಗಂಡನೂ ನೇಣಿಗೆ ಶರಣಾದ ಘಟನೆ ಗದಗ ಜಿಲ್ಲೆ ಗಜೇಂದ್ರಗಡ ತಾಲೂಕಿನ ನಾಗೇಂದ್ರಗಡ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಗ್ರಾಮದ ಮಲ್ಲಪ್ಪ ಗಡಾದ(30), ಇವರ ಪತ್ನಿ ಸುಧಾ(24) ಹಾಗೂ 3 ತಿಂಗಳ ಮಗು ರೂಪಾಶ್ರೀ ಮೃತ ದುರ್ದೈವಿಗಳು.

ಕಳೆದ ಎರಡು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದ ಮಲ್ಲಪ್ಪ ಹಾಗೂ ನಡುವೆ ಕೌಟುಂಬಿಕ ಕಲಹದಿಂದ ನಡೆದಿದೆ. ತೋಟದ ಮನೆಯಲ್ಲಿನ ರೂಂ ನಲ್ಲಿ ಪತ್ನಿ ಹಾಗೂ ಮಗುವನ್ನು ನೇಣು ಹಾಕಿರುವ ಮಲ್ಲಪ್ಪ ನಂತರ ಹಾಲ್ ನಲ್ಲಿ ತಾನು ನೇಣು ಹಾಕಿಕೊಂಡ ಸಾವನ್ನಪ್ಪಿದ್ದಾನೆ. ಗಜೇಂದ್ರಗಡ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

error: Content is protected !!