December 22, 2024

Newsnap Kannada

The World at your finger tips!

ipl01

ರೋಹಿತ್ ಶರ್ಮಾ ಅಬ್ಬರಕ್ಕೆ ಪಂಜಾಬ್ ಶರಣು

Spread the love

ಐಪಿಎಲ್‌ 20-20 ರ 13ನೇ ಸರಣಿಯ 13ನೇ ದಿನದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವು ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ 48 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ದುಬೈನ ಶೇಕ್ ಜಯೇದ್ ಸ್ಟೇಡಿಯಮ್‌ನಲ್ಲಿ‌ ನಡೆದ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಮೊದಲು ಮೈದಾನಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡದ ಉಪನಾಯಕ ಕ್ವಿಂಟನ್ ಡಿ ಕಾಕ್ ಅವರು 0 ರನ್‌ಗೇ ಪೆವಿಲಿಯನ್ ಸೇರಿದರು. ಆದರೆ ತಂಡದ ನಾಯಕ ರೋಹಿತ್ ಶರ್ಮಾ ಅವರ ಆಟದ ಅಬ್ಬರಕ್ಕೆ ಪಂಜಾಬ್ ತಂಡದ ಬೌಲರ್‌ಗಳು ಬಸವಳಿದರು. 45 ಬಾಲ್‌ಗಳಲ್ಲಿ 70 ರನ್‌‌ಗಳಿಸಿ ತಂಡದ ಅಂಕ ಬೃಹತ್ ಮೊತ್ತದ ಕಡೆ ಹೋಗುವಂತೆ ನೋಡಿಕೊಂಡರು. ಅವರ ನಂತರದ ಬ್ಯಾಟ್ಸ್‌ಮನ್ 20 ಬಾಲ್‌ಗಳಲ್ಲಿ 47 ರನ್ ಗಳಿಸಿ ತಂಡದ ಮೊತ್ತ 200ರ ಸಮೀಪ ತೆಗೆದುಕೊಂಡು ಹೋದರು. ಮುಂಬೈ ತಂಡವು 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದರು.

ಬೃಹತ್ ಮೊತ್ತದ ಗುರಿಯನ್ನು ಬೆಂಬತ್ತಿದ ಪಂಜಾಬ್ ತಂಡವು ಶೋಚನೀಯ ಸೋಲನ್ನು ಕಾಣಬೇಕಾಯಿತು. ಕೇವಲ 17 ರನ್‌ಗಳಿಗೇ ಪಂಜಾಬ್ ತಂಡದ ನಾಯಕ ಕೆ. ಎಲ್. ರಾಹುಲ್‌ ಅವರು ರಾಹುಲ್‌ ಚಹರ್ ಅವರ ಬೌಲಿಂಗ್‌ನಲ್ಲಿ ಬೋಲ್ಡ್ ಆದರು. ತರುವಾಯ ಬಂದ ಎನ್. ಪೂರನ್ ಅವರು 27 ಬೌಲಿಂಗ್‌ಗೆ 44 ರನ್ ಗಳಿಸಿ‌‌ ತಂಡದ ಮೊತ್ತವನ್ನು ಪೇರಿಸುವ ಸಮಯದಲ್ಲೇ ಜೇಮ್ಸ್ ಪ್ಯಾಟಿನ್‌ಸನ್ ಅವರ ಬಾಲ್‌ಗೆ ಔಟಾದರು. ಪಂಜಾಬ್ ತಂಡವು 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ಗಳಿಸಲಷ್ಟೇ ಶಕ್ತವಾಯಿತು.

Copyright © All rights reserved Newsnap | Newsever by AF themes.
error: Content is protected !!