ಅಪ್ಪು ಸಮಾಧಿ ದರ್ಶನಕ್ಕೆ ಸಾರ್ವಜನಿಕರಿಗೆ ಇಂದಿನಿಂದಲೇ ಅವಕಾಶ ನೀಡಲಾಗುವುದು ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದರು.
ಕಂಠೀರವ ಸ್ಟುಡಿಯೋ ದಲ್ಲಿನ ಅಪ್ಪು ಸಮಾಧಿ ಗೆ ಹಾಲು ತುಪ್ಪ ಕಾರ್ಯ ನೆರವೇರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ರಾಘವೇಂದ್ರ , ಪುನೀತ್ರ ಐದನೇ ದಿನದ ಕಾರ್ಯವನ್ನು ಇವತ್ತು ಪೂರ್ಣ ಮಾಡಿದ್ದೇವೆ. ಮುಂದೇ 11ನೇ ದಿನದ ಕಾರ್ಯದ ಬಗ್ಗೆ ಮಾಹಿತಿ ನೀಡುತ್ತೇವೆ ಎಂದರು.
ಅಪ್ಪು ಕಳೆದುಕೊಂಡ ನೋವಿನೊಂದಿಗೆ ನಾವು ಬದುಕುತ್ತೇವೆ. ನಮಗೆ ಬೇರೆ ದಾರಿ ಇಲ್ಲ, ಆಯ್ಕೆಗಳೂ ಇಲ್ಲ. ಈ ನೋವನ್ನು ಬರಿಸುವ ಶಕ್ತಿಯನ್ನು ಭಗವಂತ ನಮಗೆ ಕೊಡಲಿ ಎಂದರು.
ಪುನೀತ್ ಹೆಸರನ್ನು ಸಾಗರ ಪಟ್ಟಣದ ಒಂದು ಸರ್ಕಲ್ಗೆ, ಶಿವಮೊಗ್ಗದ ರಸ್ತೆಗೆ ಇಟ್ಟಿರೋದು ಖುಷಿ ಕೊಟ್ಟಿದೆ ಎಂದು ಹೇಳಿದರು
ಸಾರ್ವಜನಿಕ ದರ್ಶನಕ್ಕೆ ಇವತ್ತೇ ಅವಕಾಶ ಕೊಡ್ತೀವಿ. ಪುನೀತ್ ರಾಜ್ ಕುಮಾರ್ ಸಮಾಧಿಗೆ ಇಂದಿನಿಂದ ಅಭಿಮಾನಿಗಳಿಗೆ ಪ್ರವೇಶ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
- ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
- ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
More Stories
ಡ್ರಗ್ಸ್ ಕೇಸ್ ಹೆಸರಿನಲ್ಲಿ ಟೆಕಿಗೆ 40 ಲಕ್ಷ ವಂಚನೆ
ಮೈಸೂರು BEML ಅಧಿಕಾರಿ ಆತ್ಮಹತ್ಯೆ ಗೆ ಶರಣು
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು