February 23, 2026

Newsnap Kannada

The World at your finger tips!

jds cong

ದಳಪತಿಗಳ ಕೋಟೆ ಛಿದ್ರಗೊಳಿಸಲು ರಣತಂತ್ರ; JDS ಶಾಸಕರಿಗೆ ಟಿಕೆಟ್ ಗ್ಯಾರೆಂಟಿ – ಸಿದ್ದು

Spread the love

ಜೆಡಿಎಸ್​ ಶಾಸಕರನ್ನು ಕಾಂಗ್ರೆಸ್​ಗೆ ಕರೆತರಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದು ಸೋಮವಾರ ತುಮಕೂರಿನಲ್ಲಿ ದಳದ ಶಾಸಕರು ಸಿದ್ದರಾಮಯ್ಯ ಜೊತೆಗೆ ವೇದಿಕೆ ಹಂಚಿಕೊಂಡರು.

ಕಾಂಗ್ರೆಸ್​ ಪಕ್ಷಕ್ಕೆ ಬಂದರೆ ಎಸ್​.ಆರ್.ಶ್ರೀವಿನಾಸ್​,​ ಬಿಎಂಎಲ್​ ಕಾಂತರಾಜು ಇಬ್ಬರಿಗೂ ಟಿಕೆಟ್​​ ನೀಡುವುದಾಗಿ ಹೇಳಿರುವ ಸಿದ್ದರಾಮಯ್ಯ ಜೆಡಿಎಸ್‌ನ ಅತೃಪ್ತ ಶಾಸಕರಿಗೆ ಓಪನ್ ಆಫರ್‌ ನೀಡಿದರು.

ಕಾಂಗ್ರೆಸ್ ಪಕ್ಷ ಸೇರ್ಪಡೆಗೂ ಮುನ್ನವೇ ಶಾಸಕ ಎಸ್.ಆರ್.ಶ್ರೀನಿವಾಸ್‌, ಬಿಎಂಎಲ್ ಕಾಂತರಾಜುಗೆ ಟಿಕೆಟ್ ಘೋಷಣೆ ಮಾಡಿದ ಸಿದ್ದರಾಮಯ್ಯ ಜೆಡಿಎಸ್ ಭದ್ರಕೋಟೆಯನ್ನು ಛಿದ್ರಗೊಳಿಸಲು ತಂತ್ರ ಹೂಡಿದ್ದಾರೆ.

ಟಿಕೆಟ್ ಘೋಷಣೆ ಹಿಂದೆ ಮುಂಬರುವ ಜಿಪಂ, ತಾಪಂ ಚುನಾವಣೆಗೆ ಬೆಂಬಲಿಗರು ತಯಾರಾಗುವಂತೆ ಸೂಚನೆ ನೀಡಿದ್ದಾರೆ.

ಸಿದ್ದರಾಮಯ್ಯ ಜೊತೆಯಲ್ಲೇ ವೇದಿಕೆ ಹಂಚಿಕೊಂಡಿರುವ ಎಸ್.ಆರ್.ಶ್ರೀನಿವಾಸ್ ಸಿದ್ದರಾಮಯ್ಯ ಮುಂದೆ ಕುಮಾರಸ್ವಾಮಿ ವಿರುದ್ದ ವಾಗ್ದಾಳಿ ಮಾಡಿದರು.

error: Content is protected !!