February 21, 2026

Newsnap Kannada

The World at your finger tips!

y s suresh

ನೋವು ತಂದ ಪುನೀತ್ ಅಗಲಿಕೆ: ಮಂಡ್ಯದ ಅಭಿಮಾನಿಯೊಬ್ಬ ಹೃದಯಾಘಾತದಿಂದ ಸಾವು

Spread the love

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ವಿಧಿವಶ ಹಿನ್ನೆಲೆ ಆಘಾತಕ್ಕೆ ಒಳಗಾದ ಮಂಡ್ಯ ಅಭಿಮಾನಿಯೊಬ್ಬರು ಸಾವನ್ನಪ್ಪಿದ್ದಾನೆ.

ಸಾವಿನ ಸುದ್ದಿ ನೋಡುತ್ತಲೇ ವೈ.ಎಸ್.ಸುರೇಶ್ (45) ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎನ್ನಲಾಗಿದೆ.

ವೈ.ಎಸ್. ಸುರೇಶ್ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಯಲಾದಹಳ್ಳಿ ಗ್ರಾಮದ ನಿವಾಸಿ.

ಬೆಳಗ್ಗಿನಿಂದಲೂ ಅಂತಿಮ ದರ್ಶನದ ಸುದ್ದಿ ನೋಡುತ್ತಿದ್ದರು. ಮಧ್ಯಾಹ್ನ ಏಕಾಏಕಿ ಕುಸಿದುಬಿದ್ದು ದಿಢೀರ್ ಅಸ್ವಸ್ಥರಾಗಿದ್ದಾರೆ.

ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ಮಾಡುವಾಗಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ಸುರೇಶ್ ಅವರು ಪುನೀತ್ ಅಭಿಮಾನಿ ಮಾತ್ರವಲ್ಲದೇ ರಾಜ್ ಕುಟುಂಬದ ಅಭಿಮಾನಿಯಾಗಿದ್ದರು.. ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವ ಪ್ರಯತ್ನದಲ್ಲಿದ್ದರು. ಒಂದೆರಡು ಸಿನಿಮಾಗೆ ಚಿತ್ರಕಥೆಯನ್ನೂ ಬರೆದಿದ್ದರು ಎನ್ನಲಾಗಿದೆ.

error: Content is protected !!