ಮೈಸೂರು ದಸರಾದ ಸಿದ್ಧತೆ ಈಗಾಗಲೇ ಪ್ರಾರಂಭವಾಗಿದೆ. ಈಗ ಆ ಸಿದ್ಧತೆಯ ಮತ್ತೊಂದು ಭಾಗ ಪ್ರಾರಂಭವಾಗಿದೆ.
ದಸರಾ ಮಹೋತ್ಸವದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲಿರುವ ಆನೆಗಳು ಮೈಸೂರಿನತ್ತ ಪ್ರಯಾಣ ಆರಂಭಿಸುವದಕ್ಕೆ ನಿನ್ನೆ ಚಾಲನೆ ದೊರೆತಿದೆ.
ಕೋರೋನಾ ಹಿನ್ನಲೆಯಲ್ಲಿ ಈ ಬಾರಿ ಸರಳ ದಸರಾ ಆಚರಿಸಲು ನಿರ್ಧರಿಸಿರುವ ಸರ್ಕಾರ ಕ್ರಮಕ್ಕನುಗುಣವಾಗಿ ಕೇವಲ 5 ಆನೆಗಳನ್ನು ಮಾತ್ರ ಜಂಬೂ ಸವಾರಿಯಲ್ಲಿ ಬಳಸಲು ನಿರ್ಧಾರ ಮಾಡಲಾಗಿದೆ. ಈ ವರ್ಷ ದಸರಾ ಅಂಬಾರಿಯ ಸಾರಥ್ಯವನ್ನು ಅಭಿಮನ್ಯು (54) ಹೊರಲಿದ್ದಾನೆ. ಅಭಿಮನ್ಯುವಿನ ಜೊತೆಗೆ ವಿಜಯ (61) ಕಾವೇರಿ (42) ಗೋಪಿ (38) ಹಾಗೂ ವಿಕ್ರಮ (47)ರು ಇರಲಿದ್ದಾರೆ.
ಇಂದು, ಪ್ರತಿ ವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಹ ತುಲಾ ಲಗ್ನದಲ್ಲಿ ಬೆಳಿಗ್ಗೆ 10:10 ರಿಂದ 11 ಗಂಟೆಯ ಸಮಯದಲ್ಲಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರು ಅಭಿಮನ್ಯು ಪಡೆಯನ್ನು ಪೂಜಿಸಿ, ಗಜ ಪ್ರಯಾಣಕ್ಕೆ ಚಾಲನೆ ನೀಡಿದರು.
ಹುಣಸೂರಿನ ವೀರನಹೊಸಹಳ್ಳಿಯ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ಚಾಲನೆ ನೀಡಲಾಯಿತು.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ