January 13, 2025

Newsnap Kannada

The World at your finger tips!

u b shetty

ಡಿ.ಕೆ.ಶಿ​ ಆಪ್ತ , ಧಾರವಾಡದ ಯು ಬಿ ಶೆಟ್ಟಿ ನಿವಾಸದ ಮೇಲೆ ಐಟಿ ದಿಢೀರ್​ ದಾಳಿ

Spread the love

ಧಾರವಾಡ ಉದ್ಯಮಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಆಪ್ತ ಯು. ಬಿ. ಶೆಟ್ಟಿ ಮನೆ ಮೇಲೆ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ದಿಢೀರ್ ದಾಳಿ ಮಾಡಿದ್ದಾರೆ.

ಧಾರವಾಡದ ದಾನಸಕೊಪ್ಪದ ಮನೆ ಮೇಲೆ ಗೋವಾದಿಂದ ಬಂದ 5 ಜನರ ಐಟಿ ತಂಡ ದಾಳಿ ನಡೆಸಿ ತಪಾಸಣೆಯಲ್ಲಿ ತೊಡಗಿದ್ದಾರೆ.

ಮೂಲತಃ  ದಕ್ಷಿಣ ಕನ್ನಡ ಜಿಲ್ಲೆಯ ಬೈಂದೂರ ತಾಲೂಕಿನ ಉಪ್ಪುಂದ ಮೂಲದ ಯು. ಬಿ. ಶೆಟ್ಟಿ ಪ್ರಥಮ ದಜೆ೯ ಗುತ್ತಿಗೆದಾರರು ಹಾಗೂ ಉದ್ಯಮಿಯಾಗಿದ್ದಾರೆ. ಜೊತೆಗೆ  ಡಿ.ಕೆ.ಶಿವಕುಮಾರ್​ ಆಪ್ತರು ಹೌದು.

ಇತ್ತೀಚಿನ ದಿನಗಳಲ್ಲಿ ಶಾಲೆ, ಕಾಲೇಜು ಉದ್ಯಮದಲ್ಲಿ ತೊಡಗಿದ್ದ ಶೆಟ್ಟಿ ಹಲವು ವರ್ಷಗಳಿಂದ ಡಿಕೆಎಸ್​ ಆಪ್ತ ಎಂತಲೇ ಗುರುತಿಸಿಕೊಂಡಿದ್ದಾರೆ.  ಯು.ಬಿ.ಶೆಟ್ಟಿ ಮನೆಗೆ ಐಟಿ ಅಧಿಕಾರಿಗಳಿ ದಾಳಿ ಇಡುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ರಾಬರ್ಟ್ ದದ್ದಾಪುರಿ ಮನೆಗೆ ಭೇಟಿ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!