February 18, 2026

Newsnap Kannada

The World at your finger tips!

stalin

ಸಕಾ೯ರಿ ಬಸ್ ಪ್ರಯಾಣಿಸಿ ಜನರ ಸಮಸ್ಯೆ ಆಲಿಸಿದ ಸಿಎಂ ಸ್ಟಾಲಿನ್

Spread the love

ಚೆನ್ನೈನಲ್ಲಿ ಮಹಿಳೆಯರನ್ನು ಉಚಿತವಾಗಿ ಕರೆದೊಯ್ಯುವ ಮಹಾನಗರ ಪಾಲಿಕೆ ಬಸ್ಸಿನಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪ್ರಯಾಣ ಮಾಡಿ
ಪ್ರಯಾಣಿಕರೊಂದಿಗೆ ಉಚಿತ ಪ್ರಯಾಣದ ಯೋಜನೆ ಕುರಿತಂತೆ ಸಂಭಾಷಣೆ ನಡೆಸಿದರು.

ಸ್ಟಾಲಿನ್ ಅವರು ಆರನೇ ಮೆಗಾ ಕೋವಿಡ್-19 ಇನಾಕ್ಯುಲೇಷನ್ ಅಭಿಯಾನದ ಅಂಗವಾಗಿ ಆಯೋಜಿಸಲಾದ ಕೆಲವು ಲಸಿಕೆ ಶಿಬಿರಗಳಿಗೆ ಪರಿಶೀಲನೆಗೆಂದು ತೆರಳಿದ್ದ ವೇಳೆ ಕನ್ನಗಿ ನಗರದಲ್ಲಿ ಬಸ್ ಹತ್ತಿದರು.

ಸಿಎಂ ಸ್ಟಾಲಿನ್ ಎಂ-19ಬಿ ಕನ್ನಗಿ ನಗರದಿಂದ ಟಿ-ನಗರಕ್ಕೆ ಹೋಗುತ್ತಿದ್ದ ಬಸ್ ಹತ್ತಿದರು.

ಈ ವೇಳೆ ಮುಖ್ಯಮಂತ್ರಿಗಳನ್ನು ನೋಡಿ ಪ್ರಯಾಣಿಕರು ಸಂತೋಷಪಟ್ಟರು ಮತ್ತು ಮಹಿಳೆಯರಿಗಾಗಿ ಸರ್ಕಾರದ ಉಚಿತ ಬಸ್ ಪ್ರಯಾಣ ಯೋಜನೆ ಕುರಿತಂತೆ ಮಹಿಳೆಯರನ್ನು ವಿಚಾರಿಸಿದರು.

error: Content is protected !!