February 18, 2026

Newsnap Kannada

The World at your finger tips!

india vs pak

ಪಾಕ್ ವಿರುದ್ಧ ಭಾರತಕ್ಕೆ ಸೋಲು: ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಹಲ್ಲೆ!

Spread the love

ನಿನ್ನೆ ನಡೆದ ಟಿ20 ವಿಶ್ವಕಪ್‍ನಲ್ಲಿ ಪಾಕಿಸ್ತಾನ ವಿರುದ್ಧಪಂದ್ಯದಲ್ಲಿ ಭಾರತ ಸೋತಿದ್ದಕ್ಕೆ ಗುಂಪೊಂದು ನಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಕೆಲವರು ಕಾಶ್ಮೀರಿ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ.

ಪಂಜಾಬ್‍ನ ಸಂಗ್ರೂರ್ ಜಿಲ್ಲೆಯ ಭಾಯ್ ಗುರ್ದಾಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ ಹಾಗೂ ಮೊಹಲಿ ಜಿಲ್ಲೆಯ ಖಾರರ್‍ನ ರಾಯತ್ ಬಹರ ವಿವಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.

ಘಟನೆಯಲ್ಲಿ ರಾಯತ್ ಬಹರ ವಿವಿಯ ನಾಲ್ವರು ಸೇರಿದಂತೆ 10 ಕಾಶ್ಮೀರಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ.

ಹಾಸ್ಟೆಲ್‍ನಲ್ಲಿ ಹಲ್ಲೆ ನಡೆದ ವೇಳೆ ಮುರಿದ ಕುರ್ಚಿಗಳು, ಬೆಡ್‍ಗಳು ಹಾಗೂ ಗಾಯಗೊಂಡ ವಿದ್ಯಾರ್ಥಿಗಳಿರುವ ದೃಶ್ಯದ ವಿಡಿಯೋವನ್ನು ಸಾಮಾಜಿಕ ಜಾಲ ತಾಣದಲ್ಲಿ ವೈರಲ್
ಮಾಡಲಾಗಿದೆ.

error: Content is protected !!