1992 ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯನ್ನು ಧ್ವಂಸ ಮಾಡಿದ್ದ ಆರೋಪ ಹೊತ್ತಿದ್ದ ಸೇವಕರಾದ ಎಲ್.ಕೆ. ಅಡ್ವಾಣಿ, ಉಮಾಭಾರತಿ, ಮುರಳಿ ಮನೋಹರ ಜೋಷಿ ಅವರ ಮೇಲೆ 28 ವರ್ಷಗಳಿಂದ ವಿಚಾರಣೆ ನಡೆಸಿ ಇಂದು ಸಿಬಿಐ ಕೋರ್ಟ್ನ ನ್ಯಾಯಧೀಶ ಎಸ್.ಕೆ. ಯಾದವ್ ಪ್ರಕರಣದ ತೀರ್ಪು ನೀಡಿ, ಬಿಜೆಪಿಯ ಭೀಷ್ಮ ಎಲ್.ಕೆ. ಅಡ್ವಾಣಿ ಸೇರಿದಂತೆ ಎಲ್ಲ ಆರೋಪಿಗಳನ್ನೂ ಖುಲಾಸೆಗೊಳಿಸಿದ್ದಾರೆ.
ಸುಮಾರು 351 ಸಾಕ್ಷಿ, 600 ಸಾಕ್ಷ್ಯ ಚಿತ್ರಗಳನ್ನು ಪರಿಶೀಲನೆ ಮಾಡಿ, ಎರಡೂ ಕಡೆಯ ವಾದಗಳನ್ನು ಆಲಿಸಿ, ಅವಲೋಕನೆ ಮಾಡಿ ಇಂದು ಸಿಬಿಐ ಕೋರ್ಟ್ ತೀರ್ಪು ನೀಡಿದೆ. ಸೆಪ್ಟೆಂಬರ್ 16 ರಂದು ಎಸ್.ಕೆ. ಯಾದವ್ ಸೆ 30 ರಂದು ತೀರ್ಪು ಪ್ರಕಟಿಸುವದಾಗಿ ಹೇಳಿದ್ದರು.
ಮೊಘಲರ ದೊರೆ ಬಾಬರನ ಆಡಳಿತದಲ್ಲಿ ಅಯೋಧ್ಯೆಯಲ್ಲಿದ್ದ ರಾಮಮಂದಿರ ಕೆಡವಿ ಬಾಬರೀ ಮಸೀದಿ ಕಟ್ಟಿದ್ದಾರೆ ಎಂದು ಆರೋಪಿಸಿ ವಿಶ್ವ ಹಿಂದೂ ಪರಿಷತ್ನ ಸದಸ್ಯರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಆದರೆ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಉಮಾ ಭಾರತಿ, ಕಲ್ಯಾಣ್ ಸಿಂಗ್ ಹಾಗೂ ಇನ್ನೂ 44 ಮಂದಿ, ಅಯೋಧ್ಯೆಯ ಬಾಬರೀ ಮಸೀದಿಯ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿರುವಾಗಲೇ 1992 ಡಿಸೆಂಬರ್ 6 ರಂದು ಮಸೀದಿಯನ್ನು ಕೆಡವಿದ್ದ ಕಾರಣಕ್ಕೆ 48 ಜನದ ಮೇಲೆ ದೂರು ದಾಖಲಾಗಿತ್ತು. 48 ಜನದಲ್ಲಿ ಈಗಾಗಲೇ 17 ಜನ ಮೃತಪಟ್ಟಿದ್ದಾರೆ.
ಪ್ರಕರಣದ ತೀರ್ಪಿನಿಂದ ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಷಿ, ಕಲ್ಯಾಣ ಸಿಂಗ್, ಉಮಾ ಭಾರತಿ ಸೇರಿ 31 ಆರೋಪಿಗಳಿಗೆ ಬಿಡುಗಡೆ ಸಿಕ್ಕಿದೆ. ಬಿಜೆಪಿ ಪಾಳಯದಲ್ಲಿ ಸಂತಸ ಮನೆ ಮಾಡಿದೆ.
More Stories
ಬಿಜೆಪಿ ಪರಿಷತ್ ಸದಸ್ಯ ಸಿ.ಟಿ. ರವಿ ಬಿಡುಗಡೆ: ಹೈಕೋರ್ಟ್ ತಕ್ಷಣ ಬಿಡುಗಡೆಗೆ ಆದೇಶ
ಯೂಟ್ಯೂಬ್ ನೋಡಿ ಬೈಕ್ ಕಳವು ತರಬೇತಿ: 13 ಲಕ್ಷ ಮೌಲ್ಯದ 20 ಬೈಕ್ಗಳ ಕಳ್ಳತನ
ಮಂಡ್ಯ: 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅದ್ಧೂರಿ ಚಾಲನೆ