ಚಿರು ಹುಟ್ಟುಹಬ್ಬದ ನೆನಪಿನಲ್ಲಿ ನಟಿ ಮೇಘನಾ ಹೊಸ ಚಿತ್ರದ ಘೋಷಣೆ ಮಾಡಿದ್ದಾರೆ.
ಸ್ಯಾಂಡಲ್‍ವುಡ್ ನಟಿ ಮೇಘನಾ ರಾಜ್ ಮತ್ತೆ ಬಣ್ಣ ಹಚ್ಚುತ್ತಿದ್ದಾರೆ. ಪತಿ ಚಿರಂಜೀವಿ ಸರ್ಜಾ ಹುಟ್ಟುಹಬ್ಬದ ದಿನದಂದೇ ಈ ಸಂತಸವನ್ನು ಅಭಿಮಾನಿಗಳ ಮುಂದೆ ಹಂಚಿಕೊಂಡಿದ್ದಾರೆ.
ಈ ಕುರಿತಂತೆ ತಮ್ಮ ಅಧಿಕೃತ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ, ಬೇರೆ ಯಾವ ದಿನವೂ ಉತ್ತಮವಾಗಿರಲಿಲ್ಲ, ಬೇರೆ ಯಾವುದೇ ತಂಡವು ಇಷ್ಟು ಉತ್ತಮವಾಗಿರಲಾರದು, ಇದು ನಿಮ್ಮ ಜನ್ಮದಿನ, ಇದು ನಮ್ಮ ಕನಸು ಆಗಿದೆ. ಇದು ನಿಮಗಾಗಿ ಚಿರು, ಪನ್ನ ಇಲ್ಲದಿದ್ದರೆ ನಾನು ಈ ಬಗ್ಗೆ ಯೋಚಿಸುತ್ತಿದ್ದೆನೋ ಇಲ್ಲವೋ ಗೊತ್ತಿಲ್ಲ, ಅಧಿಕೃತವಾಗಿ ಹೇಳುತ್ತಿದ್ದೇನೆ ಕ್ಯಾಮರಾ, ರೋಲಿಂಗ್, ಆ್ಯಕ್ಷನ್ ಎಂದು ಬರೆದುಕೊಂಡು ತಾವು ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವ ಕುರಿತಾಗಿ ಚಿರು ಹುಟ್ಟುಹಬ್ಬದಂದು ಹೇಳಿದ್ದಾರೆ.
ಚಿರಂಜೀವಿ ಸರ್ಜಾ ನಿಧನದ ಬಳಿಕ ನಟನೆಯಿಂದ ಗ್ಯಾಪ್ ಪಡೆದುಕೊಂಡಿದ್ದ ಮೇಘನಾ ರಾಜ್ ಅವರು ಈಗ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.
ಆ ಚಿತ್ರ ಇಂದು ಚಿರು ಹುಟ್ಟುಹಬ್ಬದ ಪ್ರಯುಕ್ತ ಸೆಟ್ಟೇರುತ್ತಿದೆ. ಇದು ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಮೇಘನಾ ಆದಷ್ಟು ಬೇಗ ಕಮ್‍ಬ್ಯಾಕ್ ಮಾಡಬೇಕು ಎಂಬುದೇ ಫ್ಯಾನ್ಸ್ ಬಯಕೆ ಆಗಿತ್ತು. ಆ ಬಯಕೆಯನ್ನು ಮೇಘನಾ ಈಡೇರಿಸುತ್ತಿದ್ದಾರೆ.
ಚಿರು ಸ್ನೇಹಿತ ಪನ್ನಗಾಭರಣ ಈ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ
ವಿರಾಟ್ ಕೊಹ್ಲಿಗೆ ಬಿಬಿಎಂಪಿ ನೋಟಿಸ್