ಯುವತಿಯ ನಗ್ನ ವಿಡಿಯೋ ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡಿ ಪ್ರಿಯತಮನೇ ದುಡ್ಡು ಕಿತ್ತು ಪೀಡಿಸಿದ ಪ್ರಕರಣ ಜರುಗಿದೆ.
ಸಾಮಾಜಿಕ ಜಾಲ ತಾಣದ ಮೂಲಕ ಆರಂಭವಾದ ಬೆಂಗಳೂರು ಟು ಮೈಸೂರು ಲವ್ ಸ್ಟೋರಿ ದುರಂತವಾಗಿದೆ
ಅಪ್ಪ – ಅಮ್ಮನ್ನು ಮೀಟ್ ಮಾಡಿಸ್ತಿನಿ ಬಾ ಅಂದಿದ್ದ ಪ್ರಿಯತಮನೇ ಪ್ರೀತಿಸಿದವಳ ಬಾಳಿಗೆ ವಿಲನ್ ಆಗ್ಬಿಟ್ಟಿದ್ದ.
ಭಾವಿ ಅತ್ತೆ ಮಾವನ್ನು ನೋಡಿ ಮಾತನಾಡಿಸುವ ಖುಷಿಯಲ್ಲಿ ಬೆಂಗಳೂರಿಂದ ಮೈಸೂರು ಬಸ್ ಹತ್ತಿದ ಯುವತಿ ವಾಪಸ್ ಹೋಗಿದ್ದು ಪೊಲೀಸ್ ಸ್ಟೇಷನ್ ಗೆ!
ಇನ್ಸ್ಟಾಗ್ರಾಮ್ ಗೆಳೆಯ ಲವ್ ಮಾಡ್ತೀನಿ ಅಂತಾ ಹೇಳಿ, ಯುವತಿಯ ಬೆತ್ತಲೇ ವಿಡಿಯೋ ರೆಕಾರ್ಡ್ ಮಾಡಿ ವಂಚನೆ ಮಾಡಿರುವ ಘಟನೆ ನಡೆದಿದೆ.
ಬಸನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಯುವತಿಗೆ ಮೈಸೂರಿನ ಹರ್ಷಿತ್ ಎಂಬಾತನ ಪ್ರೀತಿ ಹೆಸರಿನಲ್ಲಿ ವಂಚನೆ ಮಾಡಿದ್ದಾನೆ. ಅಲ್ಲದೇ ಬೆತ್ತಲೇ ವಿಡಿಯೋ ರೆಕಾರ್ಡ್ ಮಾಡಿ, ಯುವತಿಗೆ ಲೈಂಗಿಕ ಕಿರುಕುಳ ನೀಡಿ ಆರೇಳು ತಿಂಗಳುಗಳಿಂದ ಹಣವನ್ನೂ ವಸೂಲಿ ಮಾಡಿದ್ದಾನೆ.
ಪ್ರಕರಣದ ವಿವರ :
ಕಳೆದ ವರ್ಷ ಬೆಂಗಳೂರಿನ 21 ವರ್ಷದ ಯುವತಿಗೆ ಮೈಸೂರಿನ ಹರ್ಷಿತ್ ಎಂಬ ಯುವಕನೊಂದಿಗೆ ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾಗಿತ್ತು.
ಇನ್ಸ್ಟಾದಲ್ಲಿ ಆರಂಭವಾದ ಸ್ನೇಹ ಸಮಯ ಕಳೆಯುತ್ತಿದಂತೆ ಪ್ರೀತಿಯಾಗಿ ಮಾರ್ಪಾಡಾಗಿತ್ತು. ಈ ನಡುವೆ ಇಬ್ಬರ ಮೊಬೈಲ್ ನಂಬರ್ಗಳು ಕೂಡ ಎಕ್ಸ್ಚೇಂಜ್ ಆಗಿದ್ದವು. ಕಳೆದ ಐದಾರು ತಿಂಗಳುಗಳಿಂದ ವಾಟ್ಸಾಪ್ನಲ್ಲಿ ಚಾಟ್ ಮಾಡಲು ಆರಂಭ ಮಾಡಿದ್ದರು.
ಈ ನಡುವೆ ಆರೋಪಿ ಯುವಕ ಚಿರಾಗ್ ಯುವತಿಗೆ ಪ್ರಪೋಸ್ ಮಾಡಿದ್ದ. ಅಲ್ಲದೇ ನನ್ನ ಪೋಷಕರನ್ನು ಒಪ್ಪಿಸಿ ನಿನ್ನನ್ನು ಮದುವೆಯಾಗುತ್ತೀನಿ ಅಂತಾ ಯುವತಿಯ ಮನವೊಲಿಸಿದ್ದನಂತೆ.
ಈ ನಡುವೆ ಯುವತಿಗೆ ನಮ್ಮ ಪೋಷಕರಿಗೆ ನಿನ್ನನ್ನು ಪರಿಚಯ ಮಾಡಿಕೊಡುತ್ತೇನೆ. ಅದ್ಕೆ ನೀನು ಮೈಸೂರಿಗೆ ಬರಬೇಕು ಎಂದು ಯುವತಿಗೆ ಆಹ್ವಾನ ನೀಡಿದ್ದನಂತೆ.
ಆತನ ಮಾತು ನಂಬಿದ್ದ ಯುವತಿ ಕಳೆದ ಆರು ತಿಂಗಳ ಹಿಂದೆ ಮೈಸೂರಿಗೆ ಭೇಟಿ ನೀಡಿದ್ದಳು. ಆದರೆ ಆ ವೇಳೆ ನೀನು ಬರೋದು ತುಂಬಾ ತಡ ಆಗಿದೆ. ಇವತ್ತು ನೀನು ಹೋಟೆಲ್ನಲ್ಲಿ ಇರು, ನಾಳೆ ಬೆಳಗ್ಗೆ ನಿನ್ನನ್ನು ಮನೆಗೆ ಕರೆದುಕೊಂಡು ಹೋಗ್ತೀನಿ ಅಂತ ಹೇಳಿ ಆಕೆನ್ನು ಹೋಟೆಲ್ನಲ್ಲಿ ಇರಿಸಿದ್ದನಂತೆ. ಈ ವೇಳೆ ಚಿರಾಗ್ ಯುವರಿಗೆ ಮತ್ತು ಬರೋ ಜ್ಯೂಸ್ ಕುಡಿಸಿ ಆಕೆ ಪ್ರಜ್ಞೆ ತಪ್ಪುವಂತೆ ಮಾಡಿದ್ದು, ಬಳಿಕ ತನ್ನ ಸ್ನೇಹಿತ ಹರ್ಷಿತ್ನನ್ನು ರೂಮ್ಗೆ ಕರೆಯಿಸಿಕೊಂಡಿದ್ದ. ಈ ವೇಳೆ ಇಬ್ಬರು ಸೇರಿ ಯುವತಿಯನ್ನು ಬೆತ್ತಲೆ ಮಾಡಿ ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿಕೊಂಡಿದ್ದರಂತೆ.
ಯುವತಿಗೆ ಬೆಳಗ್ಗೆ ಎಚ್ಚರವಾದಾಗ ಹೊಟೇಲ್ ರೂಮ್ನಲ್ಲಿ ಯುವತಿ ವಿವಸ್ತ್ರಗಳಾಗಿ ಇರುವುದನ್ನು ಕಂಡು ಶಾಕ್ ಆಗಿದ್ದಾಳೆ. ಆದರೆ ಮೊದಲೇ ಸಂಚು ಮಾಡಿದ್ದ ಆರೋಪಿಗಳು ಯುವತಿಗೆ ಫೋಟೋ, ವಿಡಿಯೋ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರಂತೆ. ಸುಮಾರು 2 ಲಕ್ಷ ರೂಪಾಯಿಗೂ ಅಧಿಕ ಹಣವನ್ನು ನೀಡಿದ್ದಳಂತೆ.
ಆರೋಪಿಗಳು ಕಳೆದ ವಾರ ಕೂಡ ಬೆಂಗಳೂರಿಗೆ ಆಗಮಿಸಿ, ಮೆಜೆಸ್ಟಿಕ್ ಬಳಿಯ ಹೋಟೆಲ್ವೊಂದಕ್ಕೆ ಯುವತಿಯನ್ನು ಕರೆಸಿದ್ದರಂತೆ. ಈ ವೇಳೆ ಯುವತಿಯ ಮೇಲೆ ಹಲ್ಲೆ ಮಾಡಿದ್ದ ಆರೋಪಿಗಳು ಮತ್ತೆ ಆಕೆಯನ್ನು ಬೆತ್ತಲು ಮಾಡಿ ದಿನವಿಡಿ ಕೂಡಿಟ್ಟ ಪಾಪಿಗಳು, ಕುತ್ತಿಗೆ ಮೇಲೆ ಚಾಕು ಇಟ್ಟು ನಿನ್ನ ಕುಟುಂಸ್ಥರಿಗೆ ಕರೆ ಮಾಡಿ ಹಣ ತಂದುಕೊಡುವಂತೆ ಬೆದರಿಕೆ ಹಾಕಿದ್ದಾಳೆ. ಈ ವೇಳೆ ಅವರಿಂದ ತಪ್ಪಿಸಿಕೊಂಡು ಬಂದು ಯುವತಿ ನೇರ ಪೋಷಕರ ಬಳಿ ಹೋಗಿ ನಡೆದ ಒಂದು ವರ್ಷದಿಂದ ನಡೆದ ಹಿಂಸೆಯನ್ನು ವಿವರಿಸಿದ್ದಾಳೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವತಿಯೊಂದಿಗೆ ಬಂದು ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆ ಗಂಭೀರತೆಯನ್ನು ಅರಿತು ಪೊಲೀಸರು ಆರೋಪಿಗಳಾದ ಚಿರಾಗ್ ಹಾಗೂ ಹರ್ಷಿತ್ನನ್ನು ಪೊಲೀಸರು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದಾರೆ. ಯುವತಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಐಪಿಸಿ 323, 506, 354 ಸೆಕ್ಷನ್ ಅಡಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ.
- ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
- ಕರ್ನಾಟಕ ಸೇರಿದಂತೆ 14 ರಾಜ್ಯಗಳಲ್ಲಿ 2 ದಿನ ಭಾರೀ ಮಳೆಯ ಮುನ್ಸೂಚನೆ
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
More Stories
ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ