ಬಾಬರಿ ಮಸೀದಿ ದ್ವಂಸ ಪ್ರಕರಣ: 27 ವರ್ಷದ ಕುತೂಹಲಕ್ಕೆ ನಾಳೆ ತೆರೆ

Team Newsnap
1 Min Read

1992 ಡಿಸೆಂಬರ್ 6 ರಂದು ದೇಶದಾದ್ಯಂತ ವಿವಾದಕ್ಕೆ ದೂಡಿ ದೇಶವನ್ನು ಅಸಂಧಿಗ್ದತೆಗೀಡು ಮಾಡಿದ್ದ ಬಾಬ್ರಿ ಮಸೀದಿ ಧ್ವಂಸ ಪ್ರಕರಣ ಕುರಿತ ತೀರ್ಪು ನಾಳೆ ಪ್ರಕಟವಾಗಲಿದೆ.

1992 ರಲ್ಲಿ ಬಾಬ್ರಿ ಮಸೀದಿಯ ಧ್ವಂಸವನ್ನು ಕರ ಸೇವಕರಾದ ಎಲ್.‌ಕೆ. ಅಡ್ವಾಣಿ, ಮುರುಳಿ ಮನೋಹರ ಜೋಷಿ, ಕಲ್ಯಾಣ್ ಸಿಂಗ್, ಉಮಾ ಭಾರತಿ ಮುಂತಾದವರು ಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ಮಸೀದಿ ನಾಶದ ಕುರಿತ ವಿಚಾರಣೆಯನ್ನು 27 ವರ್ಷಗಳಿಂದ ಸಿಬಿಐ ನ್ಯಾಯಾಲಯದಲ್ಲಿ‌ ನಡೆಸಲಾಗುತ್ತಿತ್ತು.

351 ಸಾಕ್ಷ್ಯಗಳನ್ನು ವಿಚಾರಣೆ ನಡೆಸಿ, 600 ಸಾಕ್ಷ್ಯ ಚಿತ್ರಗಳನ್ನು‌ ಪರಿಶೀಲಿಸಿ ಮಾಹಿತಿ‌ ಕಲೆಹಾಕಿ ಅವಲೋಕಿಸಿದ ಸಿಬಿಐನ ನ್ಯಾಯಾಧೀಶ ಎಸ್.ಕೆ. ಯಾದವ್ ಸೆಪ್ಟೆಂಬರ್ 16 ರಂದು ವಿಚಾರಣೆ ಕೊನೆಗೊಳಿಸಿದ್ದರು ಹಾಗೂ ಸೆಪ್ಟೆಂಬರ್ 30 ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದ್ದರು.

ಸಿಬಿಐ ನ್ಯಾಯಾಧೀಶರು ಸೆಪ್ಟೆಂಬರ್ 30 ರಂದು ಎಲ್ಲಾ ಆರೋಪಿಗಳೂ ನ್ಯಾಯಾಲಯದಲ್ಲಿ ಹಾಜರಿರಬೇಕೆಂದು ಸೂಚನೆ ನೀಡಿದ್ದರು. ಅದರಂತೆ ನಾಳೆ ಎಲ್ಲ ಆರೋಪಿಗಳೂ ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ತೀರ್ಪು ಯಾರ ಪರವಾಗಿ ಕಾದಿದಿಯೋ?

Share This Article
Leave a comment