ಉತ್ತರ ಪ್ರದೇಶದ ಲಖೀಂಪುರ್ ಖೇರಿ ಹಿಂಸಾಚಾರ ಪ್ರಕರಣದ ಪ್ರಮುಖ ಆರೋಪಿ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶಿಶ್ ಮಿಶ್ರಾನನ್ನು ಕಡೆಗೂ ಬಂಧಿಸಲಾಗಿದೆ.
ಎಸ್ಯುವಿ ವಾಹನ ಓಡಿಸಿ ರೈತರ ಹತ್ಯೆಗೆ ಕಾರಣವಾದ ಆರೋಪ ಆಶಿಶ್ ಮೇಲಿದೆ. ನಿನ್ನೆ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಿದ್ದ ಎಸ್ಐಟಿ ತಂಡ, ಸಂಜೆ ವೇಳೆಗೆ ಆಶಿಶ್ ಮಿಶ್ರಾರನ್ನು ಬಂಧಿಸಿದೆ. ಬಂಧನದ ಬಳಿಕ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ನಾಳೆ ಪೊಲೀಸ್ ಕಸ್ಟಡಿಗೆ ನೀಡುವ ಬಗ್ಗೆ ಸ್ಥಳೀಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಲಿದೆ.
ಎಸ್ಯುವಿ ವಾಹನ ಓಡಿಸಿ ರೈತರ ಹತ್ಯೆಗೆ ಕಾರಣವಾದ ಆರೋಪ ಆಶಿಶ್ ಮೇಲಿದ್ದು, ಬರೋಬ್ಬರಿ 9 ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ನಿನ್ನೆ ದಿನವಿಡೀ ವಿಚಾರಣೆ ನಡೆಸಿದ ಬಳಿಕ ಸಂಜೆ ವೇಳೆಗೆ ಆಶಿಶ್ ಮಿಶ್ರಾರನ್ನು ಉತ್ತರ ಪ್ರದೇಶದ ಎಸ್ಐಟಿ ತಂಡ ಬಂಧಿಸಿದೆ.
ನಿನ್ನೆ ಅಪರಾಧ ವಿಭಾಗ ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿದ್ದ ಆಶೀಶ್ ಮಿಶ್ರಾರನ್ನು ಡಿಐಜಿ ಉಪೇಂದ್ರ ಅಗರವಾಲ್ & ಲಖಿಂಪುರ ಎಸ್‌ಡಿಎಂ ಸಮ್ಮುಖದಲ್ಲಿ ಸುಮಾರು 10 ಗಂಟೆಗಳ ಸುದೀರ್ಘ ವಿಚಾರಣೆ ನಡೆಸಲಾಯಿತು.
ಈ ವೇಳೆ ತನಿಖಾ ತಂಡ ಸುಮಾರು 40 ಪ್ರಶ್ನೆಗಳನ್ನು ಕೇಳಿತ್ತು. ಪ್ರಮುಖವಾಗಿ ಘಟನೆ ದಿನ ಮಧ್ಯಾಹ್ನ 2:36ರಿಂದ 3:30 ರವರೆಗೆ ಎಲ್ಲಿದ್ದೀರಿ ಎಂಬ ಪ್ರಶ್ನೆ ಕೇಳಿತ್ತು. ಆಗ ತಾನು ಸ್ಥಳದಲ್ಲಿರಲಿಲ್ಲ ಅಂತ ವಿಡಿಯೋಗಳನ್ನ ತೋರಿಸಿದ್ದಾರೆ. ಅಲ್ಲದೆ 10 ಜನರ ಹೇಳಿಕೆಯ ಅಫಿಡವಿಟ್ ಅನ್ನು ಕೂಡ ಪೊಲೀಸರಿಗೆ ನೀಡಿದ್ದರು.
ವಿಚಾರಣೆಯ ವೇಳೆ ಆಶಿಶ್ ಅವರ ವಕೀಲರು ಕೂಡ ಅಲ್ಲಿ ಇದ್ದರು. ಆದ್ರೆ ಎಸ್ಐಟಿಯ ಪ್ರಶ್ನೆಗೆ ಆಶೀಶ್ ಮುಶ್ರಾ ತೃಪ್ತಿದಾಯಕವಾದ ಉತ್ತರ ನೀಡಿಲ್ಲ ಎನ್ನಲಾಗಿದೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ