ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ನಟ ಸತ್ಯಜಿತ್ (72) ಶನಿವಾರ ಮಧ್ಯರಾತ್ರಿ 2 ಘಂಟೆಗೆ ಕೊನೆಯುಸಿರೆಳೆದರು.ಬೆಳಗ್ಗೆ 8 ಗಂಟೆಯಿಂದ ಸತ್ಯಜಿತ್ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಮಧ್ಯಾಹ್ನ 3 ಗಂಟೆಯ ನಂತರ ಹೆಗೆಡೆ ನಗರದ ಖಬರ್ ಸ್ಥಾನ್ದಲ್ಲಿ ಸತ್ಯಜಿತ್ರ ಅಂತ್ಯ ಸಂಸ್ಕಾರ ನಡೆಯಲಿದೆ.
ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲ ಖಳ ನಟ, ಪೋಷಕ ನಟರಾಗಿ ಅಪಾರ ಜನಪ್ರೀಯರಾಗಿದ್ದರು.
ಕಳೆದ 6 ದಿನಗಳಿಂದ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬುಧವಾರದವರೆಗೂ ನಟನ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡಿತ್ತು. ಆದರೆ ಗುರುವಾರ ಡಯಾಲಿಸೀಸ್ ಮಾಡುವಾಗ ಹಾರ್ಟ್ ರೇಟ್ ಕಡಿಮೆಯಾಗಿತ್ತು.
ಜೊತೆಗೆ ಇಂಟರ್ನಲ್ ಬ್ಲೀಡಿಂಗ್ ಕೂಡ ಆಗುತ್ತಿದೆ. ಹೀಗಾಗಿ ಮತ್ತೆ ವೆಂಟಿಲೇಟರ್ ಸಪೋರ್ಟ್ ನೀಡಲಾಗಿತ್ತು . ಮೊನ್ನೆವರೆಗೂ ಮಾತನಾಡುತ್ತಿದ್ದರು, ಆದರೆ ನಿನ್ನೆಯಿಂದ ಮತ್ತೆ ಆರೋಗ್ಯ ಕ್ಷೀಣಿಸಿತ್ತು.
ಕೆಲ ದಿನಗಳ ಹಿಂದೆ ಸತ್ಯಜಿತ್ ಅವರಿಗೆ ಜಾಂಡೀಸ್ ಆಗಿತ್ತು. ಈ ಬೆನ್ನಲ್ಲೇ ಹೃದಯಾಘಾತ ಕೂಡ ಸಂಭವಿಸಿತ್ತು. ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ದಿನಗಳ ನಂತರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಆ ಬಳಿಕ ಮತ್ತೆ ನಟನ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಕಾರಣ ಬೌರಿಂಗ್ ಭಾನುವಾರ ಆಸ್ಪತ್ರೆಗೆ ಮತ್ತೆ ದಾಖಲಿಸಲಾಗಿತ್ತು.
- ವಯನಾಡಿನ ನೂತನ ಸಂಸದೆಯಾಗಿ ಪ್ರಿಯಾಂಕಾ ಗಾಂಧಿ ಪ್ರಮಾಣ ವಚನ
- ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
- ಬಾರ್ ಲೈಸೆನ್ಸ್ಗೆ 20 ಲಕ್ಷ ಲಂಚದ ಬೇಡಿಕೆ – ಅಬಕಾರಿ ಡಿಸಿ ವಿರುದ್ಧ ಲೋಕಾಯುಕ್ತಕ್ಕೆ ದೂರು
- ಕರ್ನಾಟಕದಲ್ಲಿ ಡಿಸೆಂಬರ್ 4ರ ತನಕ ಭಾರೀ ಮಳೆ ಮುನ್ಸೂಚನೆ
- RBI ಗವರ್ನರ್ ಶಕ್ತಿಕಾಂತ ದಾಸ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ
More Stories
ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ವಿಚ್ಛೇದನಕ್ಕೆ ಕೋರ್ಟ್ ಅನುಮೋದನೆ
ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
ತಂದೆಯಾದ ಅಭಿಷೇಕ್: ಮರಿ ರೆಬಲ್ ಸ್ಟಾರ್ ಗೆ ಜನ್ಮ ನೀಡಿದ ಅವಿವಾ