ಕೊರೋನಾ ಸಂಬಂಧ ಎಲ್ಲ ಶಾಲಾ-ಕಾಲೇಜುಗಳನ್ನು ಮುಚ್ಚಲಾಗಿತ್ತು. ಆನ್‌ಲೈನ್ ಮುಖಾಂತರ ಪಾಠಗಳನ್ನು ನಡೆಸಲಾಗಿತ್ತು. ಈಗ ಸರ್ಕಾರವು ಶಾಲೆಗಳ ಪುನರಾರಂಭಕ್ಕೆ ಆಸಕ್ತಿ ತೋರಿಸುತ್ತಿದೆ. ಅದಕ್ಕೆ ಸಿದ್ಧತೆ ನಡೆಸುತ್ತಿದೆ.
ಈ ಬಗ್ಗೆ ಎಲ್ಲ ತಾಲೂಕುಗಳ ಶಾಸಕರಿಗೆ ಮತ್ತು ಸಚಿವರಿಗೆ ಪತ್ರ ಬರೆದಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಶಾಲೆಗಳ ಆರಂಭಕ್ಕೆ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ತಿಳಿಸುವಂತೆ ಕೇಳಿದ್ದಾರೆ ಎನ್ನಲಾಗಿದೆ.
ಸಚಿವರು ಮತ್ತು ಶಾಸಕರು ಶಾಲೆಗಳ ಪುನರಾರಂಭದ ಬಗೆಗಿನ ಸಲಹೆ ಮತ್ತು ಸೂಚನೆಗಳನ್ನು ಮಿಂಚಂಚೆ ಮೂಲಕ ತಿಳಿಸಲು ಕೋರಿದ್ದಾರೆ. ‘ಕೋವಿಡ್ ಹಿನ್ನೆಲೆಯಲ್ಲಿ ಶಾಲೆಗಳ ಪುನರಾರಂಭದ ಬಗ್ಗೆ ಚಿಂತನೆ ನಡೆಸಿದೆ. ಎಲ್ಲರ ಸಲಹೆ ಹಾಗೂ ಮಾರ್ಗದರ್ಶನದ ಆಧಾರದ ಮೇಲೆ ಶಾಲೆಗಳ ಆರಂಭ ಮಾಡಲಾಗುವುದು’ ಎಂದು ಸಚಿವರು ತಿಳಿಸಿದರು.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ