December 25, 2024

Newsnap Kannada

The World at your finger tips!

ganjam

ಶ್ರೀರಂಗಪಟ್ಟಣ ಗಂಜಾಂನ ಗೋಸಾಯಿಘಾಟ್ ನಲ್ಲಿ ನಾಳೆ ಸಾವಿರಾರು ಮಂದಿಗೆ ತಿಥಿಕಾರ್ಯ

Spread the love

ಶ್ರೀರಂಗಪಟ್ಟಣ ಗಂಜಾಂ ಕಾವೇರಿ‌ನದಿ ತೀರದ ಗೋಸಾಯಿಘಾಟ್ ನಲ್ಲಿ ಸೋಮವಾರ ಅ.4 ರಂದು ಕೊರೊನಾದಿಂದ ನಿಧನರಾದ ಸಾವಿರಾರು ಮಂದಿಗೆ ತಿಥಿಕಾರ್ಯ ಏರ್ಪಡಿಸ ಲಾಗಿದೆ.

ಕಂದಾಯ ಸಚಿವ ಅಶೋಕ್ ,ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡ ಅಗೂ ಸರ್ಕಾರದ ಅಧೀನ ಕಾರ್ಯದರ್ಶಿ ಮಂಜನಾಥ್ ಪ್ರಸಾದ್ ಇತರ ರಾಜ್ಯಮಟ್ಡದ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕಳೆದ ತಿಂಗಳು ಮಳವಳ್ಳಿಯ ಬೆಳಕವಾಡಿ ಶಿಂಷಾನದಿ ದಡದಲ್ಲಿ ಕೊರೊನಾದಿಂದ ಮೃತರಾದ ಅನಾಥ ವ್ಯಕ್ತಿಗಳ ಅಸ್ಥಿ ವಿಸರ್ಜನೆ ಯನ್ನು ಸರ್ಕಾರವೇ ಕಂದಾಯ ಸಚಿವರ ನೇತೃತ್ವದಲ್ಲಿ ಮಾಡಲಾಗಿತ್ತು

1200 ಮಂದಿಗೆ ಸೋಮವಾರ ಗೋಸಾಯಿಘಾಟ್ ನಲ್ಲಿ ಕರ್ಮ ಪುಣ್ಯಾಹಗಳನ್ನು ವೇಧ ಬ್ರಹ್ಮ ಡಾ. ಭಾನುಪ್ರಕಾಶ್ ನೇತೃತ್ವದಲ್ಲಿ ಬೆಳಿಗ್ಗೆ 8 ಇಂದ ಗಂಟೆಯಿಂದ ವಿಧಿವಿಧಾನದ ಪೂಜೆಗಳಾದ ಮೋಕ್ಷನಾರಾಯಣ ಬಲಿ ,ಕರ್ಮವನ್ನು‌ಮಾಡಲಾಗುತ್ತದೆ, ಪ್ರಾರಂಭದಲ್ಲಿ ಗಣಪತಿ ಪೂಜೆ ಪುಣ್ಯಾಹ, ಪಂಚಗವ್ಯ ಮತ್ತು ದ್ವಾರಸ ನಾರಾಯಣರ 12 ಕಳಸ ಪೂಜೆ, ಪ್ರಾಯಶ್ಚಿತ ತಿಲಹೋಮಗಳು ನಡೆಯುತ್ತದೆ ಪಂಚಗವ್ಯ ಪೂಜೆಮಾಡಿ ವಿಷ್ಣು ಪಾದ ನಾಲ್ಕುವರೆ ಅಡಿ ಉದ್ದದ ವಿಷ್ಣು ಪಾದವನ್ನು ಇಟ್ಟು ಪೂಜೆ ಸಲ್ಲಿಸಲಾಗುತ್ತದೆ.


ದಶಪಿಂಡ ಪ್ರದಾನವಿಧಾನಗಳು ನಂತರ 11 ನೇದಿನದ ರುದ್ರಪಾರಾಯಣ,ದಶದಾನ ಕಾರ್ಯಗಳ ನಡೆಸಲಾಗುತ್ತದೆ. ಶ್ರೀರಂಗನ ದರ್ಶನ ಆನಂತರ ಶಾಶ್ವತಿ ಧಾರ್ಮಿಕ ಕೇಂದ್ರದಲ್ಲಿ ಮೃತರಿಗೆ ಎಡೆ ಪೂಜೆ ಮಾಡಿ , ಪ್ರಸಾದ ಕೂಡ ನಡೆಯಲಿದೆ ಎಂದು ಢಾ ಭಾನುಪ್ರಕಾಶ್ ಶರ್ಮ ತಿಳಿಸಿದ್ದಾರೆ

Copyright © All rights reserved Newsnap | Newsever by AF themes.
error: Content is protected !!