ಅಪ್ಪ ಹೋಗಿರುವ ಜಾಗಕ್ಕೆ ಹೋಗೋಣ ಬನ್ನಿ ಮಕ್ಕಳೆ ! ತಾಯಿಯೇ ಮಕ್ಕಳ ಮೈಂಡ್ವಾಶ್ ಮಾಡಿ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಿಂದಿನ ಸತ್ಯ ಬಯಲಾಗಿದೆ.
ಕೊರೊನಾದಿಂದ ಗಂಡ ಬಲಿಯಾದ ನಂತರ ಜೀವನ ಸಾಗಿಸಲಾಗದೇ ಇಬ್ಬರು ಮಕ್ಕಳು ಸಹಿತ ತಾಯಿ ವಸಂತಾ ಮಕ್ಕಳಿಗೆ ಬ್ರೈನ್ ವಾಶ್ ಮಾಡಿದ್ದಾಳೆ ಎಂಬ ಮಾಹಿತಿ ಪ್ರಾಥಮಿಕ ತನಿಖೆಯಲ್ಲಿ ಹೊರ ಬಂದಿದೆ.
ಗಂಡನಿಲ್ಲದೇ ಬದುಕು ನಡೆಸುವುದು ದುಸ್ಥರ, ನಾವು ಯಾರಿಗೂ ತೊಂದರೆ ಕೊಡುವುದು ಬೇಡ, ಅಪ್ಪ ಇಲ್ಲದೇ ಬದುಕು ತುಂಬಾ ಕಷ್ಟ. ಬನ್ನಿ ಅಪ್ಪ ಇರೋ ಜಾಗಕ್ಕೆ ನಾವೆಲ್ಲರೂ ಹೋಗಿ ಬಿಡೋಣ ಎಂದು ಮಕ್ಕಳ ತಲೆಗೆ ಸಾಯುವ ವಿಚಾರ ತುಂಬಿದ್ದಳು ಎನ್ನಲಾಗಿದೆ.
ಮೃತ ವಸಂತಾಳ ಅಮ್ಮ ತಾಯಮ್ಮನ ಬಳಿ ಮಕ್ಕಳು ಈ ವಿಚಾರವನ್ನು ಹೇಳಿದ್ದರಂತೆ. ಈ ವಿಚಾರ ತಿಳಿದ ತಾಯಮ್ಮ ಎಲ್ಲಾ ವಿಚಾರವನ್ನು ತನ್ನ ಮಗನಿಗೆ ಅಂದರೆ ವಸಂತಾಳ ಸೋದರನಿಗೆ ಹೇಳಿದ್ದಾರೆ. ಅಕ್ಕನ ನಿರ್ಧಾರ ಕೇಳಿದ ತಮ್ಮ ಗಾಬರಿಗೊಂಡಿದ್ದನಂತೆ. ಆದ್ದರಿಂದ ಕೆಲವು ದಿನ ತಾಯಿಗೆ ಅಕ್ಕನ ಜೊತೆ ಇರುವಂತೆ ಸೂಚಿಸಿ ವಸಂತಾಳ ಮನೆಯಲ್ಲಿ ಬಿಟ್ಟಿದ್ದ ಎನ್ನಲಾಗಿದೆ.
ಈ ಮಧ್ಯೆ ವಸಂತಾಳ ತಾಯಿಗೆ ಅನಾರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ಆಸ್ಪತ್ರೆಗೆ ತೋರಿಸಲು ಮಗ ಮನೆಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ.
ನಿನ್ನೆ ಸಂಜೆ ವಸಂತಾಳ ಮನೆಗೆ ತಾಯಮ್ಮ ವಾಪಸ್ ಬಂದ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಮಾಹಿತಿ ಲಭ್ಯವಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ?
ವಸಂತಾ ಸಾಯುವ ಮೂರು ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ನನ್ನ ಸಾವಿಗೆ ಯಾರು ಕಾರಣರಲ್ಲ,ನನ್ನ ಪತಿಯ ಅನಾರೋಗ್ಯದ ಸಂದರ್ಭದಲ್ಲಿ ಯಾರೂ ಸ್ಪಂದಿಸಲಿಲ್ಲ. ಕೋವಿಡ್ ನಿಂದ ಪತಿ ಮೃತಪಟ್ಟರೂ ನಮಗೆ ಯಾರೂ ನೆರವಾಗಲಿಲ್ಲ. ಮನೆ ಖರೀದಿಗೆ ಸಾಲ ಮಾಡಿದ್ದೇವೆ. ಈ ಮನೆ ಮಾರಾಟ ಮಾಡಿ ಬ್ಯಾಂಕ್ ಸಾಲ ಮತ್ತು ಕೈ ಸಾಲ ತೀರಿಸಿ, ಗಂಡನಿಲ್ಲದ ಬದುಕು ನಮಗೆ ಕಷ್ಟವಾಗುತ್ತಿದೆ. ನಾವು ಇನ್ಯಾರಿಗೂ ತೊಂದರೆ ಕೊಡುವುದಿಲ್ಲ..ನಮ್ಮವರೂ ಅಂತ ನಮಗ್ಯಾರೂ ಇಲ್ಲ.
ಎಂದು ಬರೆದಿದ್ದಾರೆ.
- ನಂಬುಗೆಯೇ ಇಂಬು
- KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
- Weekly Horoscope: ವಾರದ ಜಾತಕ ನ. 24 ರಿಂದ ನ. 30, 2024.
- ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
- ಸಂಡೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು: ಅಧಿಕೃತ ಘೋಷಣೆ ಬಾಕಿ
More Stories
ಕಾಪರ್ ಏಜ್ ಇನ್ಸ್ಟಿಟ್ಯೂಟ್ ಮಾಲೀಕ ಶರತ್ ಆತ್ಮಹತ್ಯೆ: ಕಾರಣ ನಿಗೂಢ
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
ರಾಜ್ಯದ ಹಲವೆಡೆ ಲೋಕಾಯುಕ್ತ ದಾಳಿ: 25 ಕಡೆಗಳಲ್ಲಿ ಪರಿಶೀಲನೆ