January 28, 2026

Newsnap Kannada

The World at your finger tips!

mandya , news , politics

ಮತಾಂತರದ ವಿರುದ್ದ ಕಠಿಣ ಕ್ರಮ : ಸಿದ್ದರಾಮಯ್ಯ ಹಸಿ‌ ಸುಳ್ಳುಗಾರ – ಸಚಿವ ಅಶೋಕ್

Spread the love

ಮತಾಂತರ ಎಂಬುದು ಹೀನ ಕೃತ್ಯ ,ಬಿಜೆಪಿ ಸರ್ಕಾರ ಮತಾಂತರಕ್ಕೆ ಬ್ರೇಕ್ ಹಾಕುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಮಂಡ್ಯದಲ್ಲಿ ಹೇಳಿದರು.‌

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಅಶೋಕ್ ವ್ಯಕ್ತಿ ಯಾವ ಧರ್ಮದಲ್ಲಿ ಹುಟ್ಟಿರುತ್ತಾರೆ ಆ ಧರ್ಮದಲ್ಲಿ ಪೂಜೆ ಮಾಡುವುದು ಅವರ ಹಕ್ಕು. ವಿದೇಶದಿಂದ ಹಣತಂದು, ಏಜೆಂಟ್ ಗಳ ಮೂಲಕ ಹಣಕೊಟ್ಟು ಮತಾಂತರ ಕ್ಕೆ ಆಮಿಷ ಒಡ್ಡುತ್ತಿದ್ದಾರೆ ಎಂದರು.

ಹಸು, ಎಮ್ಮೆ ಕೊಡುಸ್ತೀನಿ, ಆಸ್ಪತ್ರೆ ಖರ್ಚು‌ ನೋಡ್ಕೊಳ್ತೀನಿ ಅಂತಾ ಲಕ್ಷಾಂತರ ಜನರನ್ನು ಮತಾಂತರ ಮಾಡಲು ಮುಂದಾಗ್ತಿದ್ದಾರೆ.ಇದು ದೊಡ್ಡ ಪಿಡುಗು, ನಮ್ಮ ರಾಜ್ಯದಲ್ಲಿಯೂ ಇದೆ, ಮಂಡ್ಯ ಜಿಲ್ಲೆಯಲ್ಲಿಯೂ ಇದೆ.
ಅಂತಹ ಸಮಾಜಘಾತುಕ, ದೇಶದ್ರೋಹಿ ವ್ಯಕ್ತಿಗಳ ವಿರುದ್ದ ಕ್ರಮಕೈಗೊಳ್ತೀವಿ ಎಂದು ಹೇಳಿದರು.

ಒಂದು ಮತಾಂತರಕ್ಕೆ ಇಂತಿಷ್ಟು ಹಣ ಸಿಗಲಿದೆ ಅ ಹಣದ ಆಸೆಗೆ ಮತಾಂತರ ಮಾಡುತ್ತಿರುವ ಸಂಗತಿ ನಮಗೆ ಗೊತ್ತಾಗಿದೆ.ಬಿಜೆಪಿ ಸರ್ಕಾರ ಮತಾಂತರಕ್ಕೆ ಬ್ರೇಕ್ ಹಾಕುವ ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೆ.
ಈ ಕೆಲಸವನ್ನು ಕಾಂಗ್ರೇಸ್ ಸರ್ಕಾರ ಬಂದ್ರೆ ಮಾಡಲ್ಲ, ನಮ್ಮ ಸರ್ಕಾರ ಮಾಡಿ ತೋರಿಸು ತ್ತದೆ ಎಂದರು.

ಸಿದ್ದರಾಮಯ್ಯ ಬುರುಡೆ :

ಮಾಜಿ ಸಿಎಂ ಸಿದ್ದರಾಮಯ್ಯ ಬುರುಡೆ ಬಿಡುವುದರಲ್ಲಿ ನಂಬರ್ ಓನ್. ಅವರು ಇದ್ದಾಗ ಏಳು ಕೆಜಿ ಅಕ್ಕಿ ಕೊಡಲೇ ಇಲ್ಲ. ಈ ಕುಮಾರಸ್ವಾಮಿಯವರು ಹೇಳಿದ್ದಾರೆ ಹಣ ಮೀಸಲಿಡದೆ 7 ಕೆಜಿ ಕೊಡ್ತೀವಿ ಅಂತಾ ಬುರಡೆ ಬಿಟ್ರು ಎಂದರು ಅಶೋಕ್.

ಸಿದ್ದರಾಮಯ್ಯ ಅವಧಿಯಲ್ಲಿ ಜಾತಿ ಗಣತಿ ಮಾಡ್ತೀವಿಅಂತಾ 180 ಕೋಟಿ ಕೊಟ್ಟರು. ಜಾತಿ ಗಣತಿ ಮಾಡಲು ಎಷ್ಟುದಿನ ಬೇಕು?..
ವರದಿ‌ ಸಿದ್ದವಾದ್ರು ಬಿಡುಗಡೆ ಮಾಡೋ ಧೈರ್ಯ ಯಾಕೆ ಮಾಡಲಿಲ್ಲ ಎಂದು ಪ್ರಶ್ನೆ ಮಾಡಿದರು.

ಸಿದ್ದರಾಮಯ್ಯ ಏನೇ ಹೇಳಿದರು ಅದು ಸುಳ್ಳು. ಸುಳ್ಳು ಅಂದ್ರೆ ಸಿದ್ದರಾಮಯ್ಯ, ಸಿದ್ದರಾಮಯ್ಯ ಅಂದ್ರೆ ಸುಳ್ಳು. ಎಂದು ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದರು ಕಂದಾಯ ಸಚಿವ ಆರ್.ಅಶೋಕ್.

error: Content is protected !!