March 13, 2026

Newsnap Kannada

The World at your finger tips!

nijeriya

ಡ್ರಗ್ ಪೆಡ್ಲಿಂಗ್​ ದಂಧೆ: ಬಹುಭಾಷಾ ನಟ, ನೈಜೀರಿಯನ್ ಪ್ರಜೆ ಬಂಧನ

Spread the love

ಡ್ರಗ್​ ಪೆಡ್ಲಿಂಗ್ ದಂಧೆಯಲ್ಲಿ ತೊಡಗಿದ್ದ ಆರೋಪದ ಮೇಲೆ ಕನ್ನಡ, ಹಿಂದಿ, ತಮಿಳು ಸೇರಿ ಹಲವು ಭಾಷೆಯಲ್ಲಿ ನಟಿಸಿದ್ದ ನೈಜೀರಿಯನ್ ಪ್ರಜೆ ಚಕ್ವಿಮ್ ಮಾಲ್ವಿನ್​ ಬಂಧಿಸಲಾಗಿದೆ.

ಬೆಂಗಳೂರಿನ ಕೆಜಿ ಹಳ್ಳಿ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ ನಂತರ ತಾನು ಆರಂಭದಲ್ಲಿ ಬಾಂಬೆಗೆ ಬಂದು ನಂತರ ಬೆಂಗಳೂರಿಗೆ ಬಂದಿದ್ದೆ ಎಂದು ಹೇಳಿದ್ದಾನೆ.

ಈತ ವೃತ್ತಿಯಲ್ಲಿ ನಟನೆಯ ಬಗ್ಗೆ ತರಬೇತಿ ಪಡೆದಿದ್ದಾನೆ. ತಮಿಳು, ಕನ್ನಡ, ಮಲೆಯಾಳಂ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದ. ಆತನಿಗೆ ನಟನೆ ಪ್ಯಾಷನ್ ಅಷ್ಟೇ, ಡ್ರಗ್ ಪೆಡ್ಲಿಂಗ್ ಮಾಡಿ ದುಡ್ಡು ಮಾಡುವುದೇ ಈತನ ದಂಧೆಯಾಗಿತ್ತು ಎಂದು ಹೇಳಿದ್ದಾನೆ.

ವಿದೇಶದಿಂದ ಡ್ರಗ್ ತರಿಸಿಕೊಳ್ತಿದ್ದ. ಇಲ್ಲಿ ಬಿಸಿನೆಸ್ ಮೆನ್​ಗಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್​ ಮಾರಾಟ ಮಾಡುತ್ತಿದ್ದ ಈತನ ಜಾಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದಿದ್ದಾರೆ.

error: Content is protected !!