December 26, 2024

Newsnap Kannada

The World at your finger tips!

sunil kumar

ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಜನರೇ ತಿಳಿಸಲು ಅವಕಾಶ : ಸಚಿವ ಸುನಿಲ್‌ಕುಮಾರ್

Spread the love

ಈ ಬಾರಿಯ ರಾಜ್ಯೊತ್ಸವ ಪ್ರಶಸ್ತಿಗೊಂದು ಕಳೆ ಬರುತ್ತೆ. ಕಾರಣ ಜನರೇ ಸಾಧಕರನ್ನು ಶಿಫಾರಸಲು ಮಾಡಲು ಮೊದಲ ಬಾರಿಗೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ನವೆಂಬರ್ 1 ರಂದು 66 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಈ ವರ್ಷದ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹರನ್ನು ಗುರುತಿಸಿ ಆನ್‌ಲೈನ್ ಮೂಲಕ ಅವರ ಹೆಸರು ಶಿಫಾರಸು ಮಾಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಇಂಧನ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನಿಲ್‌ಕುಮಾರ್ ತಿಳಿಸಿದ್ದಾರೆ.

  • 66 ಅರ್ಹ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತೆ.
  • ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ ಮೂಲಕ ಹೆಸರು ಶಿಫಾರಸು ಮಾಡಬಹುದು.
  • ಪ್ರಶಸ್ತಿಗಾಗಿ ವಿಶೇಷ ನಮೂನೆಯ ಅರ್ಜಿ ಸಿದ್ಧಪಡಿಸಲಾಗಿದೆ.
  • ಮೂರು ಹೆಸರು ಶಿಫಾರಸಲು ಮಾಡಬಹುದು.
  • ವಿವಿಧ ಕ್ಷೇತ್ರಗಳ ಸಾಧಕರ ಹೆಸರು, ವಿಳಾಸ ವಿವರ ನೀಡಲು ಅರ್ಜಿ ನಮೂನೆಯಲ್ಲಿ ಅವಕಾಶ ನೀಡಲಾಗಿದೆ.
  • ರಾಜ್ಯದ ಮೂಲೆ ಮೂಲೆಯಲ್ಲಿದ್ದು, ಎಲೆಮರೆಕಾಯಿಯಂತಿರುವ ಸಾಧಕರನ್ನು ಗುರುತಿಸಿ ಪೋರ್ಟಲ್ ಮೂಲಕ ತಲುಪಿಸಬೇಕು.
  • ಜನರ ಶಿಫಾರಸನ್ನು ತಜ್ಞರ ಸಮಿತಿಗೆ ಪರಿಶೀಲನೆ ನೀಡಲಾಗುತ್ತೆ.
  • ಸಮಿತಿ ಪರಿಗಣಿಸುವವರಿಗೆ ಪ್ರಶಸ್ತಿ ಲಭ್ಯ.
  • ಕ್ರೀಡೆ ಹೊರತುಪಡಿಸಿದರೆ ಉಳಿದ ಸಾಧಕರು ಕನಿಷ್ಠ60 ವರ್ಷ ಮೇಲ್ಪಟ್ಟವರಾಗಿರಬೇಕು.
  • ಇದೇ ಮೊದಲ ಬಾರಿಗೆ ಇಂತಹ ಪ್ರಯೋಗ ಎಂದಿದ್ದಾರೆ ಸಚಿವರು.
  • ಇದು ಅತ್ಯಂತ ಪಾರದರ್ಶಕ ಹಾಗೂ ಪ್ರಜಾಪ್ರಭುತ್ವ ಸಿದ್ಧಾಂತಗಳಿಗೆ ಅನುಗುಣವಾಗಿದೆ.
  • ಮೊಬೈಲ್ ಮೂಲಕವೂ ಸೇವಾ ಸಿಂಧು ಪೋರ್ಟಲ್ ಪ್ರವೇಶಿಸಬಹುದು.
  • ಪ್ರಶಸ್ತಿಗೆ ವ್ಯಕ್ತಿಗಳ ಹೆಸರು ಕಳುಹಿಸಲು ಅಕ್ಟೋಬರ್ 15 ಕೊನೆದಿನ.
Copyright © All rights reserved Newsnap | Newsever by AF themes.
error: Content is protected !!