January 10, 2025

Newsnap Kannada

The World at your finger tips!

sattalate

ಯಾದಗಿರಿಯಿಂದ ಪಾಕ್​​ಗೆ 220 ಸ್ಯಾಟಲೈಟ್ ಫೋನ್​ ಕರೆಗಳು !

Spread the love

ಯಾದಗಿರಿಯಿಂದ ಪಾಕ್​​ಗೆ ಬರೋಬ್ಬರಿ 220 ಸ್ಯಾಟಲೈಟ್ ಫೋನ್​ ಕರೆಗಳನ್ನು ಮಾಡಲಾಗಿರುವುದು ತನಿಖೆಯಿಂದ ಬಯಲಾಗಿದೆ.

ಯಾದಗಿರಿಯಿಂದ ಪಾಕಿಸ್ತಾನಕ್ಕೆ ಸ್ಯಾಟಲೈಟ್ ಫೋನ್ ಕರೆ ವಿಚಾರಕ್ಕೆ ಸಂಬಂಧಿಸಿದಂತೆ ಸತ್ಯಾಂಶಗಳು ಬಯಲಾಗುತ್ತಿದೆ. ಜಿಲ್ಲೆಯಿಂದ 220 ಸ್ಯಾಟಲೈಟ್ ಫೋನ್ ಕರೆ ಹೋಗಿರುವ ಮಾಹಿತಿ ಲಭ್ಯವಾಗಿದೆ. ಆದರೆ ಕರೆಗಳ ಡಿಟೇಲ್ಸ್ ಕಲೆ ಹಾಕುವುದೇ ಟೆಕ್ನಿಕಲ್​ ಟೀಮ್​ಗೆ ಸವಾಲಾಗಿ ಪರಿಣಮಿಸಿದೆ.

ಸ್ಯಾಟಲೈಟ್ ಕರೆಗಳು ಎಲ್ಲಿಂದ ಎಲ್ಲಿಗೆ ಹೋಗಿವೆ ಅನ್ನೋದನ್ನು ರಾಜ್ಯದಲ್ಲಿ ಪತ್ತೆ ಹಚ್ಚೋದೆ ಕಠಿಣವಾಗಿದೆ. ಈ ಪ್ರಕರಣದ ಬೆನ್ನಲ್ಲಾದ್ರು ಟೆಕ್ನಿಕಲ್​ ಟೀಮ್​ಗೆ ಆಧುನಿಕತೆಯ ಸ್ಪರ್ಶ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಸ್ಯಾಟಲೈಟ್ ಫೋನ್​ ಬಳಕೆ ಸದ್ದಡಗಿಸಲು ಗೃಹ ಇಲಾಖೆ ಸದೃಢಡವಾಗಿದೆ ಎಂದಿರುವ ಗೃಹ ಸಚಿವರು ರಾಜ್ಯದಿಂದ ಹೊರ ದೇಶಗಳಿಗೆ ಇತ್ತೀಚೆಗೆ 220 ಸ್ಯಾಟಲೈಟ್ ಫೋನ್​ ಕರೆಗಳು ಹೋಗಿರುವುದು ದೃಢವಾಗಿದೆ. ನಿಷೇಧಿತ ಫೋನ್​ ಬಳಕೆ ಮಾಡಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!