ಬೆಂಗಳೂರಿನ ತಿಗುಳರಪಾಳ್ಯದ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ತಂದೆ ಹಲ್ಲೇಗೆರೆ ಶಂಕರ್ ಕರಾಳ ಮುಖವನ್ನು ಪುತ್ರ ಮಧು ಸಾಗರ್ ಇಂಗ್ಲಿಷ್ ನಲ್ಲಿ ಬರೆದಿರುವ ಡೆತ್ ನೋಟ್ ನಲ್ಲಿ ಬಟಾ ಬಯಲು ಮಾಡಿದ್ದಾನೆ.
ಪತ್ರದಲ್ಲಿ ತಂದೆಯ ಕರಾಳ ಮುಖ ಹೇಗಿತ್ತು ಎನ್ನುವ ಮಾಹಿತಿ ಏನು?
- ನನ್ನ ತಂದೆ ಒಬ್ಬ ಸ್ಯಾಡಿಸ್ಟ್. ಅವರು ಆಫೀಸ್ ಗೆ ಹೋಗುವುದಕ್ಕೂ ಮುನ್ನ ಮನೆಯವರನ್ನು ಮನೆಯಲ್ಲೇ ಬೀಗ ಹಾಕಿ ಕೂಡಿ ಹಾಕಿ ಹೋಗುತ್ತಿದ್ದರು.
- ಅವರೊಬ್ಬರು ಸ್ಟಾಡಿಸ್ಟ್. ತನ್ನ ತಾಯಿ. ಅಕ್ಕಂದಿರನ್ನು ಮಾನಸಿಕವಾಗಿ ಹಿಂಸೆ ಮಾಡುತ್ತಿದ್ದರು.
- ಆವರ ಕಿರುಕುಳ ನನ್ನನ್ನೂ ಬಿಡಲಿಲ್ಲ. ನಾನೂ ಕೆಲಸಕ್ಕೆ ರಾಜೀನಾಮೆ ಕೊಡುವಂತೆ ಮಾಡಿದರು.
- ನನ್ನ ತಂದೆಗೆ ಐವರು ಮಹಿಳೆಯರ ಜೊತೆ ಸಂಬಂಧ ಇತ್ತು. ಇಂತಹ ಸಂಬಂಧದ ಮಹಿಳೆಯೊಬ್ಬರ ಮಗಳನ್ನು ನಾನು ಮದುವೆ ಮಾಡಿಕೊಳ್ಳುವಂತೆ ಇತ್ತಡ ಹೇರಿದರು.
- ಮಹಿಳೆಯರ ಸಂಬಂಧಗಳ ಬಗ್ಗೆ ನನ್ನ ತಾಯಿ ಎಲ್ಲವನ್ನೂ ತಿಳಿದುಕೊಂಡಿದ್ದಳು. ಹೀಗಾಗಿಯೇ ಅಪ್ಪನನ್ನು ದೂರ ಇಟ್ಟಿದ್ದರು.
- ನನ್ನ ಅಕ್ಕಂದಿರಿಗೆ ಯಾವತ್ತೂ ಒಂದು ಇಂಚು ಆಸ್ತಿ ಕೊಡಲಿಲ್ಲ. ಅವರಿಬ್ಬರೂ ಗಂಡನಿಂದ ದೂರ ಮಾಡಿದ್ದೇ ನಮ್ಮ ಅಪ್ಪ.
- ನಮ್ಮ ಅಪ್ಪ ಹೊರಗಿನ ದೃಷ್ಟಿಯಲ್ಲಿ ತುಂಬಾ ಒಳ್ಳೆಯವರ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಆದರೆ ನಿಜವಾದ ಮುಖವಾಡವೇ ಬೇರೆಯಾಗಿತ್ತು.
- ಅವನೊಬ್ಬ ಕುಡುಕ , ಸ್ಯಾಡಿಸ್ಟ್. ಅತನ ಒಳ ಪ್ರಪಂಚವೇ ಭಯಾನಕವಾಗಿತ್ತು. ಪ್ರತಿನಿತ್ಯ ಕುಡಿದು ಮನೆಗೆ ಬಂದು ಗಲಾಟೆ ಮಾಡುತ್ತಿದ್ರು.
ಈ ಪತ್ರದಲ್ಲಿ ಬರೆದಿರುವ ಎಲ್ಲಾ ಅಂಶಗಳ ಬಗ್ಗೆ ಕೂಲಂಕಷವಾಗಿ ತನಿಖೆ ಮಾಡಲು ಬೆಂಗಳೂರಿನ ಬ್ಯಾಡರಹಳ್ಳಿ ಪೋಲಿಸರು ಶಂಕರ್ ಹಾಗೂ ಇಬ್ಬರು ಅಳಿಯಂದಿರಿಗೆ ವಿಚಾರಣೆಗಾಗಿ ನೋಟೀಸ್ ಜಾರಿ ಮಾಡಿದ್ದಾರೆ.
- SBIನಲ್ಲಿ 600 ಪ್ರೊಬೇಷನರಿ ಆಫೀಸರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
- ನಾಳೆಗಾಗಿ ಬಾಳಬೇಕು ಕೇಳು ನೊಂದ ಜೀವವೇ..!
- ತುಪ್ಪ ಎಂಬ ಮಹಾ ಔಷಧಿ
- ಸಂಸತ್ ಕಟ್ಟಡದ ಬಳಿ ಬೆಂಕಿ ಹಚ್ಚಿಕೊಂಡ ಯುವಕ ಚಿಕಿತ್ಸೆ ಫಲಕಾರಿಯಾಗದೆ ಸಾವು
- ಕರ್ತವ್ಯದ ವೇಳೆ ಬ್ರೈನ್ಸ್ಟ್ರೋಕ್ಗೆ ಬಲಿಯಾದ ಅರಣ್ಯ ಇಲಾಖೆ ನೌಕರ
More Stories
ಮುದ್ದುಲಕ್ಷ್ಮಿ ಸೀರಿಯಲ್ ನಟ ಚರಿತ್ ಬಾಳಪ್ಪ ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧನ
ಸಿಲಿಂಡರ್ ಸ್ಫೋಟ ಪ್ರಕರಣ: ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ದುರ್ಮರಣ
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ