ಹಲವು ವಿರೋಧದ ಕೂಗಿನ ನಡುವೆಯೂ ಶನಿವಾರ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ವಿಧೇಯಕ್ಕೆ ವಿಧಾನಸಭೆ ಅಂಗೀಕಾರ ದೊರೆಯಿತು.
ಪ್ರಸ್ತುತ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ರೈತ ವಿರೋಧಿಯಾಗಿದೆ. ಆತುರದಿಂದ ಭೂ ಸುಧಾರಣಾ ಕಾಯ್ದೆ 1961ಕ್ಕೆ ತಿದ್ದುಪಡಿ ತರಲಾಗಿದೆ. ಇದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಆದರೆ ಸದನದಲ್ಲಿ ಭೂ ಸುಧಾರಣಾ ತಿದ್ದುಪಡಿಯನ್ನು ಮಂಡಿಸುವಾಗ ಈ ಹಿಂದೆ ಕಾಂಗ್ರೆಸ್ ಪಕ್ಷದ ಆರ್. ವಿ. ದೇಶಪಾಂಡೆ ಅವರೇ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಬೇಕು ಎಂದು ಒತ್ತಾಯಿಸಿದ್ದರು ಎಂಬುದನ್ನು ಸ್ಮರಿಸಬಹುದು.
ಈ ಹಿಂದೆ ಭೂ ಸುಧಾರಣಾ ಕಾಯ್ದೆಯಲ್ಲಿನ 79 A ಮತ್ತು 79 B ಸೆಕ್ಷನ್ ಗಳನ್ನು ರದ್ದು ಪಡಿಸಬೇಕೆಂದು ರೈತ ಮುಖಂಡ ಪ್ರೊ. ನಂಜುಂಡ ಸ್ವಾಮಿ ವಿಧಾನಸಭೆಯಲ್ಲಿ ಹೇಳಿದ್ದರು ಎಂದು ತಿದ್ದುಪಡಿ ಕುರಿತು ಆರ್. ಅಶೋಕ್ ಸಮರ್ಥಿಸಿಕೊಂಡರು.
2015 ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಭೂ ಖರೀದಿ ಯುನಿಟ್ ಹೆಚ್ಚಳ ಮಾಡಿದ್ದರು. 79A ಹಾಗೂ 79B ಅಪ್ರಸ್ತುತ ಎಂದು ಕಾಂಗ್ರೆಸ್ ಉಪಸಮಿತಿಯೇ ವರದಿ ನೀಡಿತ್ತು. ಭೂ ಖರೀದಿಯ ಯೂನಿಟ್‌ನ್ನು 20 ರಿಂದ 40ಕ್ಕೆ ಏರಿಸಿದ್ದು ಕಾಂಗ್ರೆಸ್ ಎಂದು ತಿದ್ದುಪಡಿಯನ್ನು ವಿರೋಧಿಸಿದ ಪರೋಕ್ಷವಾಗಿ ಡಿಕೆಶಿಯವರಿಗೆ ಹಾಗೂ ಕಾಂಗ್ರೆಸ್‌ಗೆ ಚಾಟಿ ಬೀಸಿದ್ದಾರೆ.
ಇದಕ್ಕೂ ಮೊದಲು ಭೂ ಸುಧಾರಣಾ ತಿದ್ದುಪಡಿಯನ್ನು ವಿರೋಧಿಸಿ ಕಾಂಗ್ರೆಸ್‌ನ ಸದಸ್ಯರು ತಿದ್ದುಪಡಿ ಬಿಲ್‌ನ್ನು ಹರಿದು ಹಾಕಿ ಸಭಾತ್ಯಾಗ ಮಾಡಿದ್ದರು.
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭಾರತ ತಂಡದ ಟಿ20 ನಾಯಕ ಸೂರ್ಯಕುಮಾರ್ ಯಾದವ್ ಭೇಟಿ