ಇಂದು ದುಬೈನಲ್ಲಿ ನಡೆದ ಐಪಿಎಲ್ 20-20ಯ 7 ನೇ ದಿನದ ಮ್ಯಾಚ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಬಾರಿಗೆ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಐಪಿಎಲ್ ನಲ್ಲಿ ತಮ್ಮ ತಂಡಕ್ಕೆ ಒಂದು ಭದ್ರತೆ ಒದಗಿಸಿದ್ದಾರೆ.
ಕಳೆದ ಬಾರಿಯಂತೆ ಈ ಬಾರಿಯೂ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಸೋಲಿನ ಮಜಲನ್ನು ತುಳಿಯಬೇಕಾಯ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಆಟಗಾರರಾಗಿ ಮೈದಾನಕ್ಕಿಳಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಅವರು ಉತ್ತಮ ಆಟ ಆಡಿ ತಂಡ ಗೆಲ್ಲಲು ತಮ್ಮ ಪೂರ್ಣ ಶ್ರಮ ಹಾಕಿದರು. ಪಿ. ಶಾ 43 ಎಸೆತಗಳಲ್ಲಿ 64 ರನ್ ಹಾಗೂ ಶಿಖರ್ ಧವನ್ 27 ಎಸೆತಗಳಲ್ಲಿ 35 ರನ್ ಗಳ ಜೋಡಿಯಾಟ ಆಡಿ ತಂಡಕ್ಕೆ ಹುಮ್ಮಸ್ಸು ತುಂಬಿದರು. ತಂಡವು 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು.
ಡೆಲ್ಲಿ ತಂಡ ಕೊಟ್ಟ ಗುರಿಯನ್ನು ಬೆನ್ನತ್ತಿ ಹೊರಟ ಸೂಪರ್ ಕಿಂಗ್ಸ್ ಗೆ ನಿರಾಸೆ ಕಾದಿತ್ತು. ಸಿ.ಎಸ್.ಕೆ ತಂಡದ ಆರಂಭಿಕ ಆಟಗಾರರಾಗಿ ಎಂ. ವಿಜಯ್ ಮತ್ತು ಎಸ್. ವ್ಯಾಟ್ಸನ್ ಕೇವಲ 10 ಹಾಗೂ 14 ರನ್ ಗಳಿಗೆ ಪೆವಿಲಿಯನ್ ಸೇರಿದರು. ಪಾಫ್ ಡು ಪ್ಲೆಸ್ಸಿಸ್ (35 ಎಸೆತಗಳಿಗೆ 45 ರನ್) ಹಾಗೂ ಕೆ. ಜಾಧವ್ (21 ಎಸೆತಗಳಿಗೆ 26 ರನ್) ಅವರ ಆಟ ತಂಡಕ್ಕೆ ಸ್ವಲ್ಪ ಚೇತರಿಕೆ ತಂದಿತಾದರೂ, ಡೆಲ್ಲಿ ತಂಡದ ಕಗಿಸೋ ರಬಾರ್ಡಾ ಹಾಗೂ ಆನ್ರಿಕ್ ನಾರ್ಟ್ಜೇ ಅವರ ಬೌಲಿಂಗ್ ಚೆನೈ ತಂಡವನ್ನು ಕಟ್ಟಿ ಹಾಕಿತು.
ಸತತ ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಅಭಿಮಾನಿಗಳಲ್ಲಿ ಭರವಸೆ ಮೂಡಿಸಿದೆ.
More Stories
ಮೈಸೂರು- 40 ಸಾವಿರ ಲಂಚ ಸ್ವೀಕರಿಸುತ್ತಿದ್ದ ಬಿಲ್ ಕಲೆಕ್ಟರ್ ಲೋಕಾಯುಕ್ತ ಬಲೆಗೆ
IDBI ಬ್ಯಾಂಕಿನಲ್ಲಿ 600 ಹುದ್ದೆಗಳ ನೇಮಕಾತಿ – 2024
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ