ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ) ಮದ್ರಾಸ್, ದೇಶದ ಅತ್ಯುತ್ತಮ ಸಂಸ್ಥೆಗಳಲ್ಲಿ ಮೊದಲ ಸ್ಥಾನ ಗಳಿಸಿದೆ.
ಶಿಕ್ಷಣ ಸಚಿವಾಲಯದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್ ರ‍್ಯಾಂಕಿಂಗ್ ಫ್ರೇಮ್‌ವರ್ಕ್(ಎನ್‌ಐಆರ್‌ಎಫ್) ರ‍್ಯಾಂಕಿಂಗ್‌ಗಳನ್ನು ಪ್ರಕಟಿಸಿದೆ.
ಎಂಟು ಐಐಟಿ ಹಾಗೂ ಎರಡು ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಗಳು(ಎನ್‌ಐಟಿ) ದೇಶದ ಮೊದಲ ೧೦ಅತ್ಯುತ್ತಮ ಸಂಸ್ಥೆಗಳಲ್ಲಿ ಸ್ಥಾನ ಗಿಟ್ಟಿಸಿವೆ.
ಎನ್‌ಐಆರ್‌ಎಫ್ ರ‍್ಯಾಂಕಿಂಗ್‌ಗಳನ್ನು ಕೇಂದ್ರ ಶಿಕ್ಷಣ ಸಚಿವ ಧಮೇಂದ್ರ ಪ್ರಧಾನ್ ನವದೆಹಲಿಯಲ್ಲಿ ಪ್ರಕಟಿಸಿದರು.
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯು ಸಂಶೋಧನಾ ಸಂಸ್ಥೆಗಳಲ್ಲಿ ಅತ್ಯುತ್ತಮ ಎಂದು ಪ್ರಶಂಸೆ ಪಡೆದಿದೆ. ನವದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ವೈದ್ಯಕೀಯ ಕಾಲೇಜುಗಳಲ್ಲಿ ಮೊದಲ ಸ್ಥಾನ ಗಳಿಸಿದೆ.
ಅಹಮದಾಬಾದ್‌ನ ಭಾರತೀಯ ನಿರ್ವಹಣಾ ಸಂಸ್ಥೆ(ಐಐಎ) “ಬಿ”ಸ್ಕೂಲ್‌ಗಳಲ್ಲೇ ಅತ್ಯುತ್ತಮ ಸ್ಥಾನ ಗಳಿಸಿದೆ. ಜಮೀಯಾ ಹಮದರ್ದ್ ಸಂಸ್ಥೆ ಫಾರ್ಮಸಿ ಅಧ್ಯಯನದಲ್ಲಿ ಪ್ರಥಮವಾಗಿದೆ.
ಕಾಲೇಜು ವಿಭಾಗದಲ್ಲಿ ದೆಹಲಿಯ ಮಿರಂದಾ ಪ್ರಥಮ ರ‍್ಯಾಂಕ್ ಗಳಿಸಿದೆ. ರಾಷ್ಟ್ರದ ರಾಜಧಾನಿಯ ಲೇಡಿ ಶ್ರೀರಾಮ ಕಾಲೇಜು ದ್ವಿತೀಯ ಮತ್ತು ಚೆನ್ನೈ ಲೊಯೊಲಾ ಕಾಲೇಜು ಮೂರನೇ ರ‍್ಯಾಂಕ್ ಪಡೆದಿದೆ.
- ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
- ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
- ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ
- ಕೆನಡಾವನ್ನು ಅಮೆರಿಕಾದ 51ನೇ ರಾಜ್ಯವನ್ನಾಗಿ ಮಾಡಲು ಟ್ರಂಪ್ ಆರ್ಥಿಕ ಒತ್ತಡದ ಬೆದರಿಕೆ
- ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ: ಆದಾಯಕ್ಕಿಂತ ಅಧಿಕ ಆಸ್ತಿ ಆರೋಪ
More Stories
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ
ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಮದುವೆ ಸಹಾಯಧನ: ₹60,000 ಪಡೆಯಲು ಅರ್ಜಿ ಆಹ್ವಾನ!
ಮಾದಕ ವಸ್ತುಗಳ ಅಕ್ರಮ ಮಾರಾಟ: ಮೂವರು ಆರೋಪಿಗಳು ಬಂಧನ