January 29, 2026

Newsnap Kannada

The World at your finger tips!

rashmika ma

ಕ್ಲಾಸ್‌ಗೆ ಹೋಗ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ!

Spread the love

ಕನ್ನಡದ ಕುವರಿಯಾದರೂ ಪರಭಾಷೆಗಳಲ್ಲಿ ಸಾಕಷ್ಟು ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ತರಗತಿಗೆ ಹೋಗುತ್ತಿದ್ದಾರೆ. ಈಗ್ಯಾವ ಕ್ಲಾಸಿಗೆ ಅಂತ ಗಾಬರಿ ಬೇಡ. ಅದು ಚೆನೈನಲ್ಲಿರುವ ಡ್ಯಾನ್ಸ್ ಕ್ಲಾಸ್‌ಗೆ ಜಾಯಿನ್ ಆಗಿದ್ದಾರೆ.

rash allu


ಟಾಲಿವುಡ್‌ನಲ್ಲಿ ಅಲ್ಲು ಅರ್ಜುನ್‌ರ ಡ್ಯಾನ್ಸ್ ಭಾರಿ ಹವಾ ಎಬ್ಬಿಸಿದೆ. ಅವರೊಂದಿಗೆ ನಟಿಸುವ ನಟಿ ನೃತ್ಯಮಾಡುವಾಗ ತಮ್ಮ ತಾಕತ್ತು ತೋರಿಸಬೇಕಾಗುತ್ತದೆ. ಈಗ ಅಲ್ಲು ಮತ್ತು ರಶ್ಮಿಕಾ ಪ್ರಥಮ ಬಾರಿಗೆ “ಪುಷ್ಪ’ ಚಿತ್ರದಲ್ಲಿ ನಾಯಕ, ನಾಯಕಿಯಾಗಿ ನಟಿಸುತ್ತಿದ್ದಾರೆ.


ಈ ನಾಯಕನ ಜತೆ ನೃತ್ಯ ಮಾಡಬೇಕಾದರೆ ಸಾಕಷ್ಟು ತಯಾರಿ ಬೇಕೆಂಬ ಅರಿವು ಕೊಡಗಿನ ಬೆಡಗಿಗಿದೆ. ಹಾಗಾಗಿಯೇ ತರಗತಿಗೆ ಪ್ರವೇಶವಾಗಿರುವುದು. ಕೆಲವೇ ದಿವಸಗಳಲ್ಲಿ ನೃತ್ಯದ ಚಿತ್ರೀಕರಣ ಆರಂಭಿಸಲು ಚಿತ್ರದ ನಿರ್ದೇಶಕರು ನಿರ್ಧರಿಸಿದ್ದಾರೆ.


ಚಿತ್ರದ ನಾಯಕಿ ಹಾಕಬೇಕಾದ ವಿವಿಧ ರೀತಿ ಹೆಜ್ಜೆಗಳನ್ನು ಗಮನಸೆಳೆಯುವ ರೀತಿಯಲ್ಲೇ ಪ್ರದರ್ಶಿಸುವ ಸಾಮರ್ಥ್ಯವಿದೆ ಎಂಬುದನ್ನು ರಶ್ಮಿಕಾ ಈಗಾಗಲೇ “ಸರಿಲೆರು ನೀಕೇವ್ವರು’ ಹಾಗೂ “ಭೀಷ್ಮ’ಚಿತ್ರದಲ್ಲಿ ತೋರಿಸಿದ್ದಾರೆ. ಅಭಿಮಾನಿಗಳನ್ನು ರಂಜಿಸಿದ್ದಾರೆ.

error: Content is protected !!