ತಮಿಳುನಾಡು ರಾಜಕೀಯ ಮತ್ತು ಚಿತ್ರರಂಗದಲ್ಲೇ ತಮ್ಮದೇ ಛಾಪು ಬಿಟ್ಟು ಹೋಗಿರುವ, ಬಹಳಷ್ಟು ಜನರಿಗೆ ಅಮ್ಮನಂತೆ ಭಾಸವಾಗಿರುವ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಜೀವನಾಧಾರಿತ ಚಿತ್ರ “ತಲೈವಿ’ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.
ಈ ಚಿತ್ರದಲ್ಲಿ ಜಯಲಲಿತಾ ಪಾತ್ರಧಾರಿ, ಬಾಲಿವುಡ್ ನಟಿ ಕಂಗನಾ ರಣಾವತ್ ಇಂದು ಬೆಳಗ್ಗೆ ಚೆನೈ ನಾ ಮರೀನಾ ಬೀಚ್ ಸಮೀಪವಿರುವ ಜಯಾ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು. ವಿವಾದಗಳಿಂದಲೇ ಸುದ್ದಿ ಮಾಡುವ ಕಂಗನಾ, ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿ ಅಭಿಮಾನಿಗಳ ರಂಜಿಸುವ ಗುಣಧರ್ಮ ಹೊಂದಿದ್ದಾರೆ ಎಂಬ ಮಾತು ಇದೆ.
ತಮಿಳು, ತೆಲುಗು ಮತ್ತು ಹಿಂದಿ ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರ ಸೆಪ್ಟೆಂಬರ್ 10 ರಂದು ತೆರೆಯ ಮೇಲೆ ವಿಜೃಂಭಿಸಲಿದೆ.
ಈಗಾಗಲೇ “ತಲೈವಿ’ ಪೋಸ್ಟರ್, ಟೀಸರ್ ಮತ್ತು ಹಾಡಿನ ಸಣ್ಣ ದೃಶ್ಯಗಳು ಬಿಡುಗಡಯಾಗಿ ಚಿತ್ರರಸಿಕರನ್ನು ರಂಜಿಸಿವೆ. ನಟ ಅರವಿಂದ್ ಸ್ವಾಮಿ ಈ ಚಿತ್ರದಲ್ಲಿ ಎಂಜಿಆರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಚಿತ್ರಕಥೆ ಬರದಿರುವುದು ಕೆ.ವಿ. ವಿಜಯೇಂದ್ರ ಪ್ರಸಾದ್. ತಮಿಳಿನ ಹೆಸರಾಂತ ನಿರ್ದೇಶಕ ಎ.ಎಲ್. ವಿಜಯ್ ಚಿತ್ರದ ನಿರ್ದೇಶಕರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು