November 23, 2024

Newsnap Kannada

The World at your finger tips!

sa ra mahesh

ಭೂ ಅಕ್ರಮಗಳ ಮರು ಸರ್ವೇಗೆ ಆಯುಕ್ತರ ಆದೇಶ – ಸಾ ರಾ ಗೆ ಸಂಕಷ್ಟ

Spread the love

ಮೈಸೂರಿನ ದಟ್ಟಗಳ್ಳಿಯ ಸಾ ರಾ ಮಹೇಶ್ ಕಲ್ಯಾಣ ಮಂಟಪ, ಆರ್.ಟಿ.ನಗರ, ಯಡಹಳ್ಳಿ, ಲಿಂಗಾಂಬುದಿಪಾಳ್ಯ ಸೇರಿದಂತೆ ಶಾಸಕ ಸಾ. ರಾ. ಮಹೇಶ್ ವಿರುದ್ದ ಇರುವ ಎಲ್ಲಾ ಭೂ ಹಗರಣದ ಒತ್ತುವರಿ‌ ಆರೋಪಗಳ ಬಗ್ಗೆಯೂ ಸರ್ವೇ ಮಾಡುವಂತೆ ಸೂಚಿಸಲಾಗಿದೆ.

ಈ ಆದೇಶದಿಂದಾಗಿ ಭೂ ಅಕ್ರಮ ಹಗರಣ ಆರೋಪಕ್ಕೆ ಮತ್ತೆ ಮರು ಜೀವ ಬಂದಂತಾಗಿದೆ.

ಸಾ.ರಾ.ಮಹೇಶ್ ವಿರುದ್ಧ IAS ಅಧಿಕಾರಿ ರೋಹಿಣಿ ಸಿಂಧೂರಿ ಮಾಡಿದ್ದ ಆರೋಪದ ವಿಚಾರವಾಗಿ ಪುನರ್ ಸರ್ವೇ ಮಾಡಲು ಭೂ ದಾಖಲೆಗಳ ಇಲಾಖೆ ಆಯುಕ್ತ ಆದೇಶ ಹೊರಡಿಸಿದ್ದಾರೆ

ಸಿಂಧೂರಿ ಗೆ 6 ಕೋಟಿ ರು ಕಿಕ್ ಬ್ಯಾಕ್ ?

ರೋಹಿಣಿ ಸಿಂಧೂರಿ ಮೇಲೆ 14 ಲಕ್ಷ ಬ್ಯಾಗ್​​ ಖರೀದಿಯಲ್ಲಿ 6 ಕೋಟಿ ಭ್ರಷ್ಟಾಚಾರ ಆರೋಪ ಮಾಡಿರುವ ಸಾರಾ ಮಹೇಶ್ ಅವರು ನಿನ್ನೆ ಸಿಎಂಗೆ ದೂರು ನೀಡಿದ್ದರು.

ಈ ದೂರಿನ ಬೆನ್ನಲ್ಲೇ ಆಯುಕ್ತರ ಆದೇಶದಿಂದ ಶಾಸಕ ಸಾ.ರಾ. ಮಹೇಶ್ ಮತ್ತು ರೋಹಿಣಿ ಸಿಂಧೂರಿ ನಡುವೆ ಮತ್ತೆ ಜಟಾಪಟಿ ಶುರುವಾಗಿದೆ.

ಈ ಮೊದಲು ಸರ್ವೇ ನಡೆಸಿ ಒತ್ತುವರಿ ಆಗಿಲ್ಲ ಅಂತ ವರದಿ ಕೊಟ್ಟಿರುವ ಪ್ರಾದೇಶಿಕ ಆಯುಕ್ತರು. ಈಗ ಮತ್ತೆ ಸರ್ವೇ ಮಾಡಲು ಆದೇಶಿಸಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ.

ಸಾ. ರಾ. ಮಹೇಶ್ ಹಣಿಯಲು ಐಎಎಸ್ ಅಧಿಕಾರಿಗಳು ಒಂದಾಗಿ ಈ ಸರ್ವೆ ತಂತ್ರ ರೂಪಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದೆ.

ಸಾ ರಾ ಮಹೇಶ್ ಕ್ಲೀನ್ ಚಿಟ್ ಗೆ ಬ್ರೇಕ್ ಹಾಕಲು ಮುಂದಾದ ಸರ್ವೇ ಇಲಾಖೆ ಆಯುಕ್ತರು, ಮೈಸೂರು ಅಧಿಕಾರಿಗಳನ್ನು ಹೊರಗಿಟ್ಟು ಸರ್ವೇ ಕಾರ್ಯ ಪುನರ್​ ಆರಂಭಿಸುವಂತೆ ಸೂಚಿಸಿ 10 ದಿನಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿದ್ದಾರೆ ಎನ್ನಲಾಗಿದೆ.

ಇನ್ನು ಸರ್ವೇ ತಂಡದಲ್ಲಿ ಭೂದಾಖಲೆ ಗಳ ಉಪ ನಿರ್ದೇಶಕರಾದ ಮಂಡ್ಯದ ಬಿ.ಜಿ.ಉಮೇಶ್, ತುಮಕೂರಿನ ಸುಜಯ್ ಕುಮಾರ್, ದಾವಣಗೆರೆಯ ಟಿ.ಕೆ.ಲೋಹಿತ್​ರನ್ನು ನೇಮಕ ಮಾಡಲಾಗಿದೆ.

Copyright © All rights reserved Newsnap | Newsever by AF themes.
error: Content is protected !!