January 14, 2025

Newsnap Kannada

The World at your finger tips!

rajiv gandhi national park

ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರು ಬದಲಾವಣೆಗೆ ತೀರ್ಮಾನ

Spread the love

ಅಸ್ಸಾಂನಲ್ಲಿನ ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರು ಬದಲಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.

ರಾಜೀವ್ ಗಾಂಧಿ ನ್ಯಾಷನಲ್ ಪಾರ್ಕ್ ಹೆಸರನ್ನು ಒರಂಗ್ ನ್ಯಾಷನಲ್ ಪಾರ್ಕ್ ಎಂದು ಬದಲಾಯಿಸಲಾಗುವುದು. ಆದಿವಾಸಿಗಳು ಮತ್ತು ಚಹಾ ತೋಟದಲ್ಲಿ ಕೆಲಸ ಮಾಡುವ ಬುಡಕಟ್ಟು ಜನರ ಆಗ್ರಹದ ಹಿನ್ನೆಲೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಪೀಯೂಷ್ ಹಜಾರಿಕಾ ಗುವಾಹಟಿಯಲ್ಲಿ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಉದ್ಯಾನ ದರಾಂಗ್ ಹಾಗೂ ಸೋನಿತ್‌ಪುರ ಜಿಲ್ಲೆಗಳ ಮೂಲಕ ಹರಿಯುವ ಬ್ರಹ್ಮಪುತ್ರ ನದಿಯ ಉತ್ತರ ತೀರದಲ್ಲಿದೆ. 79.28 ಚದರ ಕಿ.ಮೀ. ವಿಸ್ತೀರ್ಣದ ಈ ಅರಣ್ಯವನ್ನು 1985 ರಲ್ಲಿ ವನ್ಯಜೀವಿ ಧಾಮವೆಂದು, ತದನಂತರ 1999ರಲ್ಲಿ ರಾಷ್ಟ್ರೀಯ ಉದ್ಯಾನವೆಂದು ಘೋಷಿಸಲಾಯಿತು.

ಇತ್ತೀಚಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಜೀವ್ ಗಾಂಧೀ ಖೇಲ್‌ರತ್ನ ಹೆಸರು ಬದಲಿಸಿ ಆ ಪ್ರಶಸ್ತಿಗೆ ಹಾಕಿ ಮಾಂತ್ರಿಕ ಮೇ.ಧ್ಯಾನ್‌ಚಂದ್ ಹೆಸರು ನಾಮಕರಣ ಮಾಡಿತ್ತು.

Copyright © All rights reserved Newsnap | Newsever by AF themes.
error: Content is protected !!