February 21, 2026

Newsnap Kannada

The World at your finger tips!

sudeep1

ಸಿಎಂ ಭೇಟಿಯಾದ ಸುದೀಪ್

Spread the love

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕನ್ನಡ ಚಿತ್ರರಂಗದ ಹೆಸರಾಂತ ನಟ ಕಿಚ್ಚ ಸುದೀಪ್ ಅವರು ಭೇಟಿಯಾಗಿ ಕೆಲ ಸಮಯ ಚರ್ಚೆ ನಡೆಸಿದರು.
ಇದೊಂದು ಸೌಹಾರ್ದಯುತ ಭೇಟಿಯಾಗಿತ್ತು. ರಾಜಧಾನಿಯ ಗೃಹ ಕಚೇರಿ ಕೃಷ್ಣಾಕ್ಕೆ ಆಗಮಿಸಿದ ಸುದೀಪ್ ಸಿಎಂ ಅವರೊಂದಿಗೆ ಕೆಲಹೊತ್ತು ಮಾತುಕತೆಯಲ್ಲಿ ತೊಡಗಿದ್ದರು. ಕೊರೊನಾ ಹೆಮ್ಮಾರಿಯ ಪರಿಣಾಮ ಕನ್ನಡ ಚಿತ್ರರಂಗ ಎದುರಿಸುತ್ತಿರುವ ಬಿಕ್ಕಟ್ಟಿನ ಬಗ್ಗೆ ಸಹಜವಾಗಿ ಪ್ರಸ್ತಾಪವಾಗಿರುವ ಸಾಧ್ಯತೆ ಇದೆ.


ಬೊಮ್ಮಾಯಿ ಕನ್ನಡ ಚಿತ್ರರಂಗದ ಪ್ರಮುಖರೊಂದಿಗೆ ಮುಂಚಿನಿಂದಲೂ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಇತ್ತೀಚಿಗಿನ ಸಮಾರಂಭದಲ್ಲಿ ರಾಜ್ ಕುಟುಂಬದ ವಿಶೇಷವಾಗಿ ರಾಘವೇಂದ್ರ ರಾಜ್‌ಕುಮಾರ್ ಜತೆ ಇದ್ದ ಒಡನಾಟದ ಬಗ್ಗೆ ಸ್ವತಃ ಸಿಎಂ ಅವರೇ ಹೇಳಿದ್ದರು. ಪವರ್‌ಸ್ಟಾರ್ ಪುನೀತ್ ಕುರಿತು ಮಾತನಾಡಿದ್ದರು.

error: Content is protected !!