ಸ್ಯಾಂಡಲ್ವುಡ್ನಲ್ಲಿ ಮೂರು ಹಿಟ್ ಚಿತ್ರಗಳನ್ನು ನೀಡಿ ಕನ್ನಡ ಚಿತ್ರರಂಗವು ತನ್ನತ್ತ ನೋಡುವಂತೆ ಮಾಡುವಲ್ಲಿ ಯಶಸ್ವಿಯಾದವರು ನಿರ್ದೇಶಕ ಸಂತೋಷ್ ಆನಂದ್ ರಾಮ್.

ಈಗ ಇವರು ದುಬಾರಿ ಕಾರಿ ಖರೀದಿಸಿ ತಮ್ಮ ಬಹುದಿನಗಳ ಬಯಕೆಯನ್ನು ಈಡೇರಿಸಿಕೊಂಡಿದ್ದು ಒಂದೆಡೆಯಾದರೆ, ಅಲ್ಪ ಅವಧಿಯಲ್ಲೇ ಸ್ಟಾರ್ ನಿರ್ದೇಶಕರಾಗಿ ಕಂಗೊಳಿಸಿ ಅದಕ್ಕೆ ಸರಿಸಾಟಿಯಾಗುವಂತಹ ಕಾರನ್ನು ಹೊಂದಿದ್ದು ಗಮನಾರ್ಹ. ಖ್ಯಾತಿ, ಹಣ ಸೇರುತ್ತಲೇ ದೊಡ್ಡ ಕಾರು, ದೊಡ್ಡ ಬಂಗಲೆ, ದೊಡ್ಡ ಅಭಿಮಾನಿಗಳ ಬಳಗ ಬರುವುದು ಸಹಜವೆ.
ಕೆಲ ದಿನಗಳ ಹಿಂದೆ ನಟ ಶೈನ್ಶೆಟ್ಟಿ, ನಟಿ ಮೇಘಾ ಶೆಟ್ಟಿ ದುಬಾರಿ ಕಾರುಗಳನ್ನು ಖರೀದಿಸಿ ಸುದ್ದಿಯಾಗಿದ್ದರು. ಈಗ ಸಂತೋಷ್ ಆನಂದ್ ರಾಮ್ ಸರದಿ.
ಸಕುಟುಂಬ ಸಮೇತರಾಗಿ ಬೆಂಗಳೂರಿನ ವೈಟ್ಫೀಲ್ಡ್ನಲ್ಲಿನ ಶೋರೂಂಗೆ ಹೋದ ಯಶಸ್ವಿ ನಿರ್ದೇಶಕ, ಬಿಎಂಡ್ಲೂ 520 ಡಿ ಕಾರನ್ನು ಖರೀದಿಸಿದ್ದಾರೆ. ನೂತನ “ಸಂಗಾತಿ’ ಜತೆಗಿನ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಬಿಎಂಡ್ಲೂ 520ಡಿಗೆ ಮನೆಗೆ ಸ್ವಾಗತ ಎಂದು ಶೀರ್ಷಿಕೆ ಹಾಕಿಕೊಂಡಿದ್ದಾರೆ. ಸಂತೋಷ್ ಅವರು ನಿರ್ದೇಶಿಸಿದ ರಾಕಿಂಗ್ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ನಟಿಸಿದ್ದ “ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ‘ ಸಾಕಷ್ಟು ಹೆಸರುಗಳಿಸಿತು. ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ನಾಯಕತ್ವದ “ರಾಜಕುಮಾರ‘ ನಿರ್ದೇಶನದಿಂದ ಇವರ ಖ್ಯಾತಿ ಏರುಮುಖವಾಗಿ, ಚಿತ್ರರಸಿಕರ ಮನದಲ್ಲಿ ಸ್ಥಾನ ದಕ್ಕಿಸಿಕೊಂಡರೆಂದೇ ಹೇಳಬಹುದು.
ಇನ್ನು “ಯುವರತ್ನ’ ಚಿತ್ರದಲ್ಲಿ ತಮ್ಮ ಸಾಮರ್ಥ್ಯವನ್ನು ಸಂತೋಷ್ ಆನಂದ್ ರಾಮ್ ಮತ್ತೊಮ್ಮೆ ಪ್ರೂವ್ ಮಾಡಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್