ಮೃದುಪಾದ ಸವಿಮೋದ
ಮಧುರವೀ ನಗುಮನದ
ಹದುಳುತನ ಸಂಪಿಗೆಯು ಜೀಕುತಿರಲು
ನಿದಿರೆಯಲಿ ಸೊಗಸಾಗಿ
ಪದರೇಣು ಕಣದೊಳಗೆ
ಪದರಂಗ ತುಂಬುವುದ ಕಾಯುತಿರಲು…
ಬುವಿಯೆಲ್ಲ ಕಾದಿರಲು
ಭವರೋಗ ತೊಲಗಿಸಲು
ಕವಿದಿರುವ ಮನಗಳಿಗೆ ಜೀವಾಮೃತ
ಅವನಿಯಲಿ ಕೃತಕೃತ್ಯ
ಪವಣಿಸುತ ನೋಡುವನು
ಪವಡಿಸುವ ಯದುನಂದ ಕೃಷ್ಣಾಮೃತ..
ಮಥುರೆಯಾ ಮಣ್ಣಿನಲಿ
ಪತಿತಪಾವನನ ಸಿರಿ
ಮತಭೇದವಿಲ್ಲದೇ ಶೋಭಿಸುತಿದೆ
ಮೆತುವಾದ ನುಡಿಗಳಲಿ
ಲತೆಯಂತೆ ಮೋಹಕವು
ವಿತತದೊಳು ಹೊಮ್ಮುತಿಹ ನಾದದಂತೆ||
ಯದುಕುಲದ ಮಾಣಿಕ್ಯ
ವದನದಲಿ ನಗೆಬೀರಿ
ವಧಿಸಿದಾ ಕಂಸನನು ಬಾಲಕೃಷ್ಣ
ವಿದಳಿಸುತ ಜನಜನಿತ
ವಿದಿತನಿವ ಮಾಧವನು
ಮುದಿತದೊಳು ಮುನ್ನುಗ್ಗಿ ಮೆರೆದಾಡಿದ||
ಎದ್ದು ಬಾ ಗೆದ್ದು ಬಾ
ಸದ್ದು ಮಾಡುತ ನೀನು
ಬಿದ್ದಿರದೆ ಸಿದ್ಧತೆಯ ಮಾಡುತಿರು ನೀ
ಮುದ್ದಿನಲಿ ನಗಿಸುತಿಹ
ಬದ್ಧತೆಯ ತೋರುತಲಿ
ಮೆದ್ದು ಬಾ ಬೆಣ್ಣೆಯನು ಮುರುಳಿಲೋಲ

- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ