December 26, 2024

Newsnap Kannada

The World at your finger tips!

boy 17

ಪೋಷಕರು ಡಿಸ್ಟರ್ಬ್ ಮಾಡಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ

Spread the love

ಪೋಷಕರಿಂದ ಆನ್ ಲೈನ್ ಕ್ಲಾಸ್​ಗೆ ತೊಂದರೆ ಆಯ್ತು ಎಂಬ ಕಾರಣಕ್ಕಾಗಿ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.‌
ಈ ಘಟನೆ ಜಿಲ್ಲೆಯ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಜರುಗಿದೆ.

ಗುರುಚರಣ್ ಉಡುಪಾ (17) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ಗುರುಚರಣ್ ಉಡುಪಿಯ ಪ್ರತಿಷ್ಠಿತ ಕಾಲೇಜ್​ನಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ. ವಾಡಿ ಪಟ್ಟಣದ ಬಿರ್ಲಾ ಕ್ವಾಟರ್ಸ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದುಬಂದಿದೆ.

ಎರಡು ದಿನದ ಹಿಂದೆ ಆನ್​ಲೈನ್​ ಕ್ಲಾಸ್​ನಲ್ಲಿದ್ದಾಗ ತಂದೆ – ತಾಯಿ ಮಾತನಾಡಿಸಿ ಡಿಸ್ಟರ್ಬ್​ ಮಾಡಿದ್ದಾರಂತೆ.

ಈ ವೇಳೆ ಡಿಸ್ಟರ್ಬ್ ಮಾಡಬೇಡ ಅಮ್ಮಾ ಎಂದು ಹೇಳಿದ್ದಾನೆ ಎನ್ನಲಾಗಿದೆ. ನಂತರ ನೊಂದು ಕೊಠಡಿಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.

ವಾಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತಿದ್ದಾರೆ.‌

Copyright © All rights reserved Newsnap | Newsever by AF themes.
error: Content is protected !!