March 13, 2026

Newsnap Kannada

The World at your finger tips!

acb 1

ಗುತ್ತಿಗೆದಾರನಿಂದ ಲಂಚ : ಕಾವೇರಿ ನೀರಾವರಿ ನಿಗಮದ ಮೂವರು ನೌಕರರು ಎಸಿಬಿ ಬಲೆಗೆ

Spread the love

ಗುತ್ತಿಗೆದಾರರೊಬ್ಬರಿಂದ 8 ಸಾವಿರ ಲಂಚ ಸ್ವೀಕರಿಸುವ ಮುನ್ನ ಕೆ ಆರ್ ಎಸ್ ನ ಕಾವೇರಿ ನೀರಾವರಿ ನಿಗಮದ ಮೂವರು ನೌಕರರು ಎಸಿಬಿ ಬಲೆಗೆ ಬಿದ್ದಿದ್ದಾರೆ.

ಕಾವೇರಿ ನೀರಾವರಿ ನಿಗಮದ ಹಣಕಾಸು ವಿಭಾಗದ ಅಧೀಕ್ಷಕ ಕರೀಗೌಡ, ಲೆಕ್ಕಾಧಿಕಾರಿ ರಾಮಚಂದ್ರ ಹಾಗೂ ಪ್ರಥಮ ದರ್ಜೆ ಗುಮಾಸ್ತ ಸುರೇಶ್ ಅವರುಗಳೇ ಲಂಚ ಸ್ವೀಕರಿಸುವ ಮುನ್ನ ಬಲೆಗೆ ಬಿದ್ದಿದ್ದಾರೆ.‌

ಗುತ್ತಿಗೆದಾರ ಸಚಿನ್ ಕೃಷ್ಣಮೂರ್ತಿ ಎಂಬುವವರು ಅಂದಾಜು ಒಂದೂವರೆ ಲಕ್ಷದ ಕಾಮಗಾರಿ ಮಾಡಿದ್ದರು. ಈ ಕಾಮಗಾರಿಯ ಬಿಲ್ ಪಾವತಿಗಾಗಿ ಈ ಮೂವರು 8 ಸಾವಿರ ಬೇಡಿಕೆ ಇಟ್ಟಿದ್ದರು.

ಈ ಲಂಚದ ಹಣ ಸ್ವೀಕಾರ ಮಾಡುವ ಮುನ್ನ ಎಸಿಬಿ ಡಿವೈಎಸ್ಪಿ ಧರ್ಮೇಂದ್ರ ದಾಳಿ ಮಾಡಿ ಮೂವರನ್ನು ಬಂಧಿಸಿದ್ದಾರೆ.

error: Content is protected !!