ಏಪ್ರಿಲ್‌ನಿಂದ ಪದವಿ ಕಾಲೇಜುಗಳಲ್ಲಿ ಪಾಠ ಮಾಡುತ್ತಿದ್ದ ಅತಿಥಿ ಉಪನ್ಯಾಸಕರಿಗೆ ಸರ್ಕಾರವು ವೇತನವನ್ನು ಮಂಜೂರು ಮಾಡಲು ಸಿಎಂ ಯಡಿಯೂರಪ್ಪ ಅಸ್ತು ಎಂದಿದ್ದಾರೆ.
ಕಳೆದ ೬ ತಿಂಗಳಿನಿಂದ ವೇತನ
ಸಿಗದೇ ಕೆಲವು ಅತಿಥಿ ಉಪನ್ಯಾಸಕರು ಆರ್ಥಿಕ ಮುಗ್ಗಟ್ಟಿನಿಂದ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದನ್ನು ಸ್ಮರಿಸಬಹುದು.
ಈ ವಿಷಯದ ಕುರಿತು ಮಂಗಳವಾರ ವಿಧಾನ ಪರಿಷತ್ ನಲ್ಲಿ, ಬಿಜೆಪಿ ಸದಸ್ಯ ಆಯನೂರು ಮಂಜುನಾಥ್ ಅತಿಥಿ ಉಪನ್ಯಾಸಕರಿಗೆ ವೇತನ ಮಂಜೂರು ಮಾಡುವಂತೆ ಧರಣಿ ಪ್ರಾರಂಭಿಸಿದರು.
ಇದಕ್ಕೆ ಕಾಂಗ್ರೆಸ್ ಮತ್ತು ಜೆಡಿಎಸ್ ನವರೂ ಬೆಂಬಲಿಸಿದರು. ಕೊನೆಗೆ ಧರಣಿಗೆ ಮಣಿದ ಸಿಎಂ ಯಡಿಯೂರಪ್ಪನವರು, ರಾಜ್ಯದ ೧೪,೪೪೭ ಅತಿಥಿ ಉಪನ್ಯಾಸಕರಿಗೆ ಬಾಕಿ ವೇತನ ಮಂಜೂರು ಮಾಡುವದಾಗಿ ಪ್ರಕಟಿಸಿದರು.
More Stories
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು