ಸಿಬಿಎಸ್ ಸಿ 10ನೇ ತರಗತಿ ಫಲಿತಾಂಶ ಪ್ರಕಟ – ಶೇ.99.04 ವಿದ್ಯಾರ್ಥಿಗಳು ತೇರ್ಗಡೆ

Team Newsnap
1 Min Read
no extra fee to be collected for NEET JEE IIT exams

ಸಿಬಿಎಸ್​​ಸಿ 10ನೇ ತರಗತಿಯ ಪರೀಕ್ಷೆಯಲ್ಲಿ ಶೇ.99.04 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಯಾಗಿದ್ದಾರೆ.

ಕೊರೋನಾದಿಂದಾಗಿ 10 ನೇತರಗತಿ ಪರೀಕ್ಷೆಗಳನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳ ಯೂನಿಟ್​ ಟೆಸ್ಟ್​​, ಪ್ರಿ ಬೋರ್ಡ್​ ಎಕ್ಸಾಂ, ಮಿಡ್​-ಟರ್ಮ್​​ ಪರೀಕ್ಷೆ ಫಲಿತಾಂಶಗಳ ಆಧಾರದ ಮೇಲೆ ಮಂಡಳಿ ಫಲಿತಾಂಶ ಪ್ರಕಟಿಸಿದೆ.

ಫಲಿತಾಂಶದ ವಿವರ :

  • ಕಳೆದ ವರ್ಷ ಶೇ.91.46 ರಷ್ಟಿದ್ದ ಪರೀಕ್ಷಾ ಫಲಿತಾಂಶ ಈ ಬಾರಿ ಶೇ.8ರಷ್ಟು ಹೆಚ್ಚಾಗಿದೆ.
  • 21.5 ಲಕ್ಷ ವಿದ್ಯಾರ್ಥಿಗಳಲ್ಲಿ 16,639 ವಿದ್ಯಾರ್ಥಿಗಳ ಫಲಿತಾಂಶ ನೀಡುವ ಪ್ರತಿಕ್ರಿಯನ್ನು ಮಂಡಳಿ ನಡೆಸುತ್ತಿದೆ,
  • ಸದ್ಯ 21 ಲಕ್ಷ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್​​ಲೋಡ್ ಮಾಡಿಕೊಳ್ಳಬಹುದಾಗಿದೆ.
  • 2,00,962 ವಿದ್ಯಾರ್ಥಿಗಳು ಶೇ.90 ಅಂಕಗಳನ್ನು ಪಡೆದಿದ್ದಾರೆ.
  • 57,824 ವಿದ್ಯಾರ್ಥಿಗಳು ಶೇ.95 ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. 

*ಇನ್ನು ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 26,841 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಿಲ್ಲ.

  • cbse.nic.in ವೆಬ್​​ಸೈಟ್​​ ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಫಲಿತಾಂಶ ಪಡೆಯಬಹುದಾಗಿದೆ.
Share This Article
Leave a comment