ತೆಲುಗಿನ ನಟನೊಬ್ಬ ಜಯಂತಿಗೆ ಕಪಾಳ ಮೋಕ್ಷ ಮಾಡಿದ ಘಟನೆಯನ್ನು ಹಿರಿಯ ನಟಿ ಲಕ್ಷ್ಮೀ ನೆನಪಿಸಿಕೊಂಡರು.
ಜಯಂತಿ ನಿಧನಕ್ಕೆ ಸಂತಾಪ ಸೂಚಿಸಿ ಮಾತನಾಡಿದ ಲಕ್ಷ್ಮೀ
ಜಯಂತಿಗೆ ತಾಳ್ಮೆ ಜಾಸ್ತಿ ಇತ್ತು. ಎಂದಿಗೂ ಕೋಪ ಮಾಡಿಕೊಂಡವರಲ್ಲ.
ಒಂದು ಘಟನೆ ನನಗೆ ಇನ್ನೂ ನೆನಪಿದೆ. ತೆಲುಗು ಸಿನಿಮಾದ ಶೂಟಿಂಗ್ ಒಂದನ್ನು ಮುಗಿಸಿ ಅವರು ಬೆಂಗಳೂರಿಗೆ ಬರ್ಬೇಕಿತ್ತು.
ಊಟದ ವೇಳೆ ಇಬ್ಬರೂ ಮೀಟ್ ಮಾಡಿದ್ವಿ. ಇನ್ನೊಂದು ಸಿನಿಮಾ ಶೂಟ್ಗೆ ಹೋಗಬೇಕು.. ಹೀರೋ, ನಿರ್ಮಾಪಕಗೆ ತುಂಬಾ ಕೋಪ ಏನು ಮಾಡೋದು ಎಂದರು.
ಅದು ಕ್ಲೈಮ್ಯಾಕ್ಸ್ ಶೂಟ್ ಅಲ್ವಾ.. ಇವರಿಗೆ ಹೇಳಿ ಹೊರಡಿ ಎಂದು ಹೇಳಿದ್ದೆ. ನಾನು ಆತನ ಹೆಸರು ಹೇಳೋದಿಲ್ಲ. ಕೆಲವು ಹೊತ್ತಿನಲ್ಲೇ ಆತ ಬಂದು ಜಯಂತಿ ಅಮ್ಮನಿಗೆ ಹೊಡೆದುಬಿಟ್ಟಿದ್ದಾರೆ ಅಂತ ನನಗೆ ಹೇಳಿದರು ನನಗಿಂತಲೂ ಚಿಕ್ಕವಯಸ್ಸಿನವನು ಅಂತ ಜಯಂತಿ ಅಮ್ಮ ಸುಮ್ಮನಾಗಿಬಿಟ್ಟರು.
ಜಯಂತಿ ಜೀವನದಲ್ಲಿ ಅಷ್ಟಾಗಿ ಖುಷಿಯಾಗಿರಲಿಲ್ಲ.. ಒಳಗೆ ಅಗಾಧವಾದ ದುಃಖವನ್ನು ಇಟ್ಟುಕೊಂಡಿದ್ದರು. ಹೋಗುವಾಗಲೂ ಹೇಳದೇ ಹೊರಟುಹೋದರು ಎಂದು ನಟಿ ಲಕ್ಷ್ಮೀ ಬೇಸರದಿಂದ ಹೇಳಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ