February 25, 2026

Newsnap Kannada

The World at your finger tips!

cbse

ಸಿಬಿಎಸ್ ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ : ಮೆರಿಟ್ ಪಟ್ಟಿ ಇಲ್ಲ

Spread the love

ಈ ವರ್ಷ ಯಾವುದೇ ಮೆರಿಟ್ ಪಟ್ಟಿ ಇಲ್ಲದೇ ಸಿಬಿಎಸ್ ಸಿ 10ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ ಮಾಡಲಾಗಿದೆ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) 10ನೇ ತರಗತಿ ಫಲಿತಾಂಶ ಇಂದು (ಜುಲೈ 24ನೇ) ಮಧ್ಯಾಹ್ನ 3. ಗಂಟೆಗೆ ತನ್ನ ಅಧಿಕೃತ cbseresults.nic.in, cbse.nic.in ಮತ್ತು cbse.gov.in. ವೆಬ್​​ಸೈಟ್​ನಲ್ಲಿ ಪ್ರಕಟಿಸಿದೆ.

ಸುಮಾರು 21,50,761 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲು ನಿರ್ಧರಿಸಿದ್ದರು. ಆದರೆ, ಕೊರೋನಾ ಕಾರಣದಿಂದ ಕೇಂದ್ರ ಶಿಕ್ಷಣ ಸಚಿವಾಲಯವು ಪರೀಕ್ಷೆಗಳನ್ನು ರದ್ದುಗೊಳಿಸಿತು. ಈಗ ಮಂಡಳಿ ವಿದ್ಯಾರ್ಥಿಗಳಿಗೆ ತನ್ನ ಪರ್ಯಾಯ ಮೌಲ್ಯಮಾಪನ ನೀತಿಯನ್ನು ಅಳವಡಿಸಿ ಫಲಿತಾಂಶ ಪ್ರಕಟಿಸಿದೆ.

ಪ್ರತಿ ವರ್ಷದಂತೆ ಈ ಬಾರಿಯೂ 20 ಆಂತರಿಕ ಅಂಕಗಳು ನೀಡಲಾಗಿದೆ. ಉಳಿದ 80 ಅಂಕಗಳನ್ನು ವಿವಿಧ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳ ಸಾಧನೆಯ ಆಧಾರದ ಲೆಕ್ಕಹಾಕಲಾಗಿದೆ ಎಂದು ಮಂಡಳಿ ಸ್ಪಷ್ಟಪಡಿಸಿದೆ.

error: Content is protected !!