ಟೋಕಿಯೋ ಒಲಿಂಪಿಕ್ಸ್ನಲ್ಲಿ ಮೊದಲ ಬೆಳ್ಳಿಪದಕ ಗೆದ್ದ ಭಾರತದ ಮೀರಾ ಬಾಯಿ ಚಾನು ದೇಶದ ವಿಜಯ ಪತಾಕಿ ಹಾರಿಸಿದ್ದಾರೆ.
ಟೋಕಿಯೊ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೊದಲ ಈ ಪದಕ ಬಂದಿದೆ. ಒಲಂಪಿಕ್ಸ್ನಲ್ಲಿ ಮಹಿಳಾ ವೇಯ್ಟ್ ಲಿಫ್ಟಿಂಗ್ನಲ್ಲಿ ಮೀರಾಬಾಯಿ ಚಾನು ಬೆಳ್ಳಿ ಪದಕ ಗೆದ್ದಿದ್ದಾರೆ.
49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಮೀರಾಬಾಯಿ ಭಾರತಕ್ಕೆ ಗೌರವ ತಂದಿದ್ದಾರೆ. ಜಪಾನ್‌ನ ಟೋಕಿಯೋದಲ್ಲಿ ಒಲಂಪಿಕ್ಸ್ ನಡೆಯುತ್ತಿದೆ.
ಪ್ರಧಾನಿ ಶುಭಾಷಯ :
ಪ್ರಧಾನಿ ಮೋದಿ ಈ ಗೆಲುವು ಕುರಿತಂತೆ ಟ್ವೀಟ್ ಮಾಡಿ ಮೀರಾಬಾಯಿ ಚಾನು ಅವರಿಗೆ ಶುಭಾಶಯ ಹೇಳಿದ್ದಾರೆ.
ಟೋಕಿಯೋ 2021 ಪ್ರಾರಂಭಿಸಲು ಇದಕ್ಕಿಂತ ಖುಷಿಯಾದ ಪ್ರಾರಂಭ ಇನ್ನೇನು ಬೇಕು..? ಮೀರಾಬಾಯಿ ಚಾನು ಅವರ ಅತ್ಯದ್ಭುತ ಆಟದಿಂದ ಭಾರತ ಉಲ್ಲಸಿತಗೊಂಡಿದೆ. ಅವರ ಗೆಲುವು ಎಲ್ಲರನ್ನೂ ಉತ್ತೇಜಿಸುತ್ತದೆ ಎಂದಿದ್ದಾರೆ.
202 ಕೆಜಿ ತೂಕ ಎತ್ತಿದ ಮೀರಾ :
ಮಹಿಳಾ ವೇಯ್ಟ್ ಲಿಫ್ಟಿಂಗ್ನ ಕೊನೆಯ ಸುತ್ತಿನಲ್ಲಿ ಭಾರತದ ಮೀರಾಬಾಯಿ ಚಾನು 202 ಕೆ.ಜಿ ತೂಕ ಎತ್ತಿದರೆ, ಚೀನಾದ ಹೊಯಿ ಝುಯಿಹುಯಿ 210 ಕೆಜಿ ತೂಕ ಲಿಫ್ಟ್ ಮಾಡುವ ಮೂಲಕ ಹೊಸ ಒಲಂಪಿಕ್ ದಾಖಲೆ ಬರೆದು, ಚಿನ್ನದ ಪದಕ ತಮ್ಮದಾಗಿಸಿಕೊಂಡರು.
- ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
- ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
- ವಿಚಿತ್ರ ಕಾಯಿಲೆಗೆ 15 ಜನರು ಬಲಿಪಡೆದ ಅನುಮಾನಾಸ್ಪದ ಘಟನೆ
- ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
- ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
More Stories
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಬಾಲಿವುಡ್ ನಟ ಸೈಫ್ ಅಲಿ ಖಾನ್ ಮೇಲೆ ದಾಳಿ – ಆಸ್ಪತ್ರೆಯಲ್ಲಿ ಚಿಕಿತ್ಸೆ
ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ಗರಿಷ್ಠ ರನ್ ಹಾಗೂ ಭರ್ಜರಿ ಗೆಲುವು