ಡಿಆರ್ ಡಿಓ ನಿಂದ ಆ್ಯಂಟಿ – ಟ್ಯಾಂಕ್ ಗೈಡೆಡ್ ಕ್ಷಿಪಣಿ ಯಶಸ್ವಿ ಪರೀಕ್ಷೆ

Team Newsnap
1 Min Read

ಒರಿಸ್ಸಾದಲ್ಲಿ ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ), ಕಡಿಮೆ ತೂಕದ ಕ್ಷಿಪಣಿ ಪ್ರಯೋಗವನ್ನು ಮ್ಯಾನ್ ಪೋರ್ಟಬಲ್ ಆಂಟಿಟ್ಯಾಂಕ್ ಗೈಡೆಡ್ ಮಿಸೈಲ್ (ಎಂಪಿಎಟಿಜಿಎಂ) ಪರೀಕ್ಷೆ ಬುಧವಾರ ಯಶಸ್ವಿ ಯಾಗಿದೆ.

ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯು ಮಾಡಿದ ಈ ಸಾಧನೆಯೂ ಆತ್ಮನಿರ್ಭರ ಭಾರತ ಮತ್ತು ಭಾರತೀಯ ಸೇನೆಗೆ ಶಕ್ತಿ ತುಂಬಿದೆ.

ಸೋಷಿಯಲ್​ ಮೀಡಿಯಾದಲ್ಲಿ ಕಡಿಮೆ ತೂಕದ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ ಡಿಆರ್​ಡಿಒ ಪರೀಕ್ಷೆ ಯಶಸ್ವಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದು ಎಂಪಿಎಟಿಜಿಎಂನ ಯಶಸ್ವಿ ಪರೀಕ್ಷೆಯ ನಾಲ್ಕನೇ ಸರಣಿಯಾಗಿದೆ.

ಕ್ಷಿಪಣಿಯನ್ನು ಸುಧಾರಿತ ಏವಿಯಾನಿಕ್ಸ್ ಜೊತೆಗೆ ಅತ್ಯಾಧುನಿಕ ಇನ್ಫ್ರಾರೆಡ್ ಇಮೇಜಿಂಗ್ ಸೀಕರ್​ನೊಂದಿಗೆ ಸಂಯೋಜನೆ ಮಾಡಲಾಗಿದೆ. ಕ್ಷಿಪಣಿಯು ಉದ್ದೇಶಿತ ಗುರಿಯನ್ನು ತಲುಪಿದೆ

Share This Article
Leave a comment