ರಾಜ್ಯದಲ್ಲಿ ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ ಎಂದು ಶಾಸಕ ಬಸವನ ಗೌಡ ಪಾಟೀಲ್ ಯತ್ನಾಳ್ ಚಾಮರಾಜ ನಗರದಲ್ಲಿ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್ ಭ್ರಷ್ಟಾಚಾರದ ಬಗ್ಗೆ ಹೈಕಮಾಂಡ್ ಸಮಗ್ರವಾಗಿ ಕಾದು ನೋಡುತ್ತಿದೆ. ಎಷ್ಟು ಬೇಗ ಸಿಎಂ ಬಗಲಾಗುತ್ತಾರೋ ಅಷ್ಟು ಬೇಗ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಯಾರೂ ನಿರೀಕ್ಷೆ ಮಾಡದ ವ್ಯಕ್ತಿ ಸಿಎಂ ಆಗುತ್ತಾರೆ. ಒಳ್ಳೆಯವರು, ಪ್ರಾಮಾಣಿಕರು, ಹಿಂದುತ್ವದ ಪರ ಇರುವವರು ಸಿಎಂ ಆಗುತ್ತಾರೆ ಎಂದಿದ್ದಾರೆ.
ಹೈಕಮಾಂಡ್ ಒಂದು ವೇಳೆ ನನಗೆ ಅವಕಾಶ ಕೊಟ್ಟರೆ ಬೇಡ ಅನ್ನಲ್ಲ. ಅಲ್ಲದೇ ಕೆಲವು ಶಾಸಕರು ಟಿಕೆಟ್ ಕೊಡಲ್ಲ ಅನ್ನೋ ಭಯದಿಂದ ಮಾತನಾಡುತ್ತಿಲ್ಲ ಅಂತಾ ತಮ್ಮದೇ ಪಕ್ಷದವರ ಬಗ್ಗೆ ಕಿಡಿಕಾರಿದ್ದಾರೆ.
ನಾನು ಸಿಎಂ ಆದರೆ ಚಾಮರಾಜ ನಗರಕ್ಕೆ ಭೇಟಿ ನೀಡುತ್ತೇನೆ. ಯಡಿಯೂರಪ್ಪ ಇದುವರೆಗೂ ಬಂದಿಲ್ಲ. ಏಕೆಂದರೆ ಇಲ್ಲಿಗೆ ಬಂದ್ರೆ ಅಧಿಕಾರ ಹೋಗುತ್ತದೆ ಎನ್ನುವ ಭೀತಿ. ಆದರೆ ಸಿದ್ದರಾಮಯ್ಯ ಚಾಮರಾಜನಗರ ಕ್ಕೆ ಬಂದಿದ್ದರು. ಐದು ವರ್ಷ ಅಧಿಕಾರ ಮಾಡಲಿಲ್ವಾ ? ಎಂದು ಮರು ಪ್ರಶ್ನೆ ಮಾಡಿದರು.
- ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಗೊ.ರು.ಚ ಆಯ್ಕೆ
- ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮತ್ತು ಸಾಯಿರಾ ಬಾನು ವಿಚ್ಛೇದನ
- ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
- 100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
- ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ
More Stories
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ