January 13, 2025

Newsnap Kannada

The World at your finger tips!

ec2c6462 ee2b 4caa bc68 d10e9b404511

ಜುಲೈ 19 -22 ರಂದು ಎಸ್ ಎಸ್ ಎಲ್ ಸಿ ಪರೀಕ್ಷೆ: ಶಿಕ್ಷಣ ಸಚಿವರಿಂದ ಘೋಷಣೆ

Spread the love

ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ಜುಲೈ 19 ಮತ್ತು ಜುಲೈ 22 ರಂದು ಎರಡು ದಿನಗಳು ನಡೆಯಲಿದೆ.‌

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ  ಶಿಕ್ಷಣ ಸಚಿವ ಸುರೇಶ್​ ಕುಮಾರ್, ವಿದ್ಯಾರ್ಥಿಗಳಿಗೆ ಹೆಚ್ಚು ಹೊರೆಯಾಗದಂತೆ ಪ್ರಶ್ನೆ ಪತ್ರಿಕೆ ಗಳನ್ನು ಸಿದ್ದ ಮಾಡಲಾಗಿದೆ. ಅಲ್ಲದೇ ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.

ಪರೀಕ್ಷೆಯ ಮಹತ್ವದ ಮಾಹಿತಿ ಗಳು:

  • ಜುಲೈ 19, 22ರಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ
  • ಜುಲೈ 19ರಂದು ಕೋರ್‌ ವಿಷಯಗಳಾದ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ
  • ಜುಲೈ 22ರಂದು ಕನ್ನಡ , ಇಂಗ್ಲಿಷ್ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ
  • ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30ರವರೆಗೆ ಪರೀಕ್ಷೆ
  • ಬುಧವಾರವೇ ಹಾಲ್​ ಟಿಕೆಟ್ ಬಿಡುಗಡೆ

ಈ ಬಾರಿ 8,76,581 ವಿದ್ಯಾರ್ಥಿ ಗಳು ಪರೀಕ್ಷೆ ಬರೆಯಲಿ ದ್ದಾರೆ.

  • ರಾಜ್ಯದಲ್ಲಿ ಒಟ್ಟು 73,066 ಪರೀಕ್ಷಾ ಕೇಂದ್ರಗಳಿರುತ್ತವೆ
  • ಒಂದು ಡೆಸ್ಕ್​​ನಲ್ಲಿ ಒಬ್ಬ ವಿದ್ಯಾರ್ಥಿಗೆ ಮಾತ್ರ ಅವಕಾಶ
  • ಕೊಠಡಿಯಲ್ಲಿ 12 ಮಂದಿ ಮಾತ್ರ ಅವಕಾಶ
  • ಪರೀಕ್ಷಾ ಕೇಂದ್ರದಲ್ಲಿ ಶಿಕ್ಷಕರು 8.30 ಗಂಟೆಗೆ ಹಾಜರಾಗಿರುತ್ತಾರೆ
  • ಜೂನ್ 30ಕ್ಕೆ ಮಕ್ಕಳಿಗೆ ಹಾಲ್​ ಟಿಕೆಟ್ ನೀಡಲಾಗುತ್ತದೆ
  • ಕೊರೊನಾ ಲಕ್ಷಣಗಳಿರುವ ಮಕ್ಕಳಿಗೆ ಕೊರೊನಾ ಕೇರ್​ ಸೆಂಟರ್​ನಲ್ಲೇ ಪರೀಕ್ಷೆ
  • ಕೊಠಡಿಯ ಮೇಲ್ವಿಚಾರಕರು ಲಸಿಕೆ ಪಡೆದಿರಲೇ ಬೇಕು
  • ಎಲ್ಲಾ ಕೇಂದ್ರಗಳಲ್ಲಿ ಆಶಾ ಕಾರ್ಯಕರ್ತರು, ವೈದ್ಯಕೀಯ ಸಿಬ್ಬಂದಿ ನಿಗಾ ವಹಿಸುತ್ತಾರೆ

Copyright © All rights reserved Newsnap | Newsever by AF themes.
error: Content is protected !!