February 24, 2026

Newsnap Kannada

The World at your finger tips!

sidda

ಪದಾಧಿಕಾರಿಗಳ ಪಟ್ಟಿ ನೀಡುವಂತೆ ಸಿದ್ದರಾಮಯ್ಯಗೂ ಹೈಕಮಾಂಡ್ ಸೂಚನೆ

Spread the love

ಕಾಂಗ್ರೆಸ್ ನ‌ ನೂತನ ಪದಾಧಿಕಾರಿ ಗಳ ಆಯ್ಕೆ ಕುರಿತಂತೆ ಪಟ್ಟಿ ಕಳುಹಿಸಿಕೊಡಲು ಪಕ್ಷದ ಹೈಕಮಾಂಡ್​ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯಗೂ ಸೂಚನೆ ನೀಡಿದೆ.

ರಾಜ್ಯ ಕಾಂಗ್ರೆಸ್​​​ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಚರ್ಚೆ ಜೋರಾಗಿರುವ ನಡುವೆಯೇ ನೂತನ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಪಟ್ಟಿ ಕಳುಹಿಸಿಕೊಡಲು ಸಿದ್ದರಾಮಯ್ಯ ಅವರನ್ನು ಕೇಳಿರುವುದು ಕುತೂಹಲ ಮೂಡಿಸಿದೆ.

ಇತ್ತೀಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ಭೇಟಿ ನೀಡಿ ಪಕ್ಷದ ವರಿಷ್ಠರ ಜೊತೆಗೆ ಮಾತುಕತೆ ನಡೆಸಿದ್ದರು. ಶಿವಕುಮಾರ್ ಅವರ ಭೇಟಿ ಬೆನ್ನಲ್ಲೇ ಪದಾಧಿಕಾರಿಗಳ ಆಯ್ಕೆಗೆ ಪಟ್ಟಿ ಕಳುಹಿಸಿಕೊಡಿ ಎಂದು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡುವ ಮೂಲಕ ಪದಾಧಿಕಾರಿಗಳ ಆಯ್ಕೆ ಕುರಿತಂತೆ ಸಿದ್ದರಾಮಯ್ಯ ಅವರನ್ನು ಹೈಕಮಾಂಡ್​ ವಿಶ್ವಾಸಕ್ಕೆ ತೆಗೆದುಕೊಂಡಿದೆ.

ಪಕ್ಷದ ಪದಾಧಿಕಾರಿಗಳ ನೇಮಕದಲ್ಲಿ ಕೆಪಿಸಿಸಿ ಅಧ್ಯಕ್ಷರಿಗೆ ಪರಮಾಧಿಕಾರವಿದ್ದರೂ ಕೂಡ ಕಾಂಗ್ರೆಸ್​ ವರಿಷ್ಠರು ಸಿಎಲ್​ಪಿ ನಾಯಕನ ಮೊರೆ ಹೋಗಿದೆ.

ಸದ್ಯ ವರಿಷ್ಠರ ಸೂಚನೆ ಮೇರೆಗೆ ಸಿದ್ದರಾಮಯ್ಯ ಅವರು ಪದಾಧಿಕಾರಿಗಳ ಪಟ್ಟಿ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದಾರೆ.

error: Content is protected !!