November 28, 2024

Newsnap Kannada

The World at your finger tips!

highcourt,congress,lokayukta

shock for Congress: High Court order to cancel ACB - Lokyukta gets power again

2 ನೇ ಪಿಯುಸಿ ಪರೀಕ್ಷೆ ರದ್ದು: ಪಾಸು ಮಾಡುವ ನಿರ್ಧಾರಕ್ಕೆ ತಡೆ- ರಿಪೀಟಸ್೯ಗೆ ಏಕೆ ಅನ್ಯಾಯ ಹೈಕೋರ್ಟ್ ಪ್ರಶ್ನೆ

Spread the love

ಕೊರೋನಾ ಕಾರಣಕ್ಕಾಗಿ ದ್ವಿತೀಯ ಪಿಯು ಪರೀಕ್ಷೆಯನ್ನು ರದ್ದುಗೊಳಿಸಿ, ವಿದ್ಯಾರ್ಥಿಗಳನ್ನು ಪಾಸು ಮಾಡಿ ಆದೇಶ ಹೊರಡಿಸುವ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್​ ತಡೆ ನೀಡಿದೆ.‌

ಹೊಸ ಅಭ್ಯರ್ಥಿಗಳನ್ನು ಮಾತ್ರ ಪಾಸ್ ಮಾಡಿ ರಿಪೀಟರ್ಸ್​​ಗೆ ಮಾಮೂಲಿ ಪರೀಕ್ಷೆ ಇರುತ್ತದೆ ಎಂದು ಹೇಳಿದ್ದ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಆಕ್ರೋಶ ವ್ಯಕ್ತಪಡಿಸಿದೆ.

ಪಿಯು ವಿದ್ಯಾರ್ಥಿಗಳನ್ನು ಪಾಸ್ ಮಾಡಿದ ಬಳಿಕ ರಿಪೀಟರ್ಸ್​​ ತಮಗೆ ಸರ್ಕಾರ ಅನ್ಯಾಯ ಮಾಡಿದೆ ಎಂದು ಸಿಂಗ್ರೀಗೌಡ ಕೋರ್ಟ್​ ಮೊರೆ ಹೋಗಿದ್ದರು.

ಹೈಕೋರ್ಟ್ ಸರ್ಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ ಅಲ್ಲದೆ ದ್ವಿತೀಯ ಪಿಯು ಫಲಿತಾಂಶ ಪ್ರಕಟಕ್ಕೆ ತಡೆ ನೀಡಿದೆ.

ರೆಗ್ಯೂಲರ್​ ವಿದ್ಯಾರ್ಥಿಗಳನ್ನು ಮಾತ್ರ ಪಾಸ್​ ಮಾಡಿರೋದು ಸರಿಯಲ್ಲ. ಪಾಸ್​ ಮಾಡಿದ್ರೆ ಎಲ್ಲರನ್ನೂ ಮಾಡಬೇಕಿತ್ತು. ರೆಗ್ಯುಲರ್ ವಿದ್ಯಾರ್ಥಿಗಳನ್ನು ಪಾಸ್ ಮಾಡಿ, ರಿಪೀಟರ್ಸ್​​​ ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸುವುದು ಸರಿಯಲ್ಲ ಎಂದು ಹೈಕೋರ್ಟ್​​ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದೆ.

ಗುರುವಾರದ ತನಕ ಪಿಯುಸಿ ಫಲಿತಾಂಶ ಪ್ರಕಟ ಮಾಡದಿರುವಂತೆ ಹೈಕೋರ್ಟ್​ ಸೂಚಿಸಿದೆ. ಈ ವಿಚಾರ ಕುರಿತು ಸರ್ಕಾರದ ಅಡ್ವೋಕೇಟ್ ಜನರಲ್​​ಗೆ ಗುರುವಾರದೊಳಗೆ ಮಾಹಿತಿ ನೀಡುವಂತೆ ಹೈಕೋರ್ಟ್ ಸೂಚನೆ ನೀಡಿದೆ.

Copyright © All rights reserved Newsnap | Newsever by AF themes.
error: Content is protected !!